ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಮೂರ್ತಿ ನಜೀರ್‌ ಭಿನ್ನಮತ

Last Updated 27 ಸೆಪ್ಟೆಂಬರ್ 2018, 20:02 IST
ಅಕ್ಷರ ಗಾತ್ರ

ನವದೆಹಲಿ: ಮಸೀದಿಯು ಇಸ್ಲಾಂನ ಅಂತರ್ಗತ ಅಂಶ ಅಲ್ಲ ಮತ್ತು ನಮಾಜ್‌ ಮಾಡಲು ಮಸೀದಿಯೇ ಬೇಕಿಲ್ಲ, ಬಯಲಿನಲ್ಲಾದರೂ ಮಾಡಬಹುದು ಎಂಬ 1994ರ ಇಸ್ಮಾಯಿಲ್‌ ಫಾರೂಕಿ ಪ್ರಕರಣದ ತೀರ್ಪು ಸಮಗ್ರ ಪರಿಶೀಲನೆಯ ನಂತರ ಕೊಟ್ಟಿರುವುದಲ್ಲ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಸ್. ಅಬ್ದುಲ್‌ ನಜೀರ್ ಹೇಳಿದ್ದಾರೆ.

ಪ್ರಕರಣದಲ್ಲಿ ನಜೀರ್‌ ಅವರು ಭಿನ್ನಮತದ ತೀರ್ಪು ಕೊಟ್ಟಿದ್ದಾರೆ.

ಒಂದು ಧರ್ಮದ ಯಾವುದೇ ಪದ್ಧತಿಯು ಆ ಧರ್ಮದ ಅಗತ್ಯ ಭಾಗವೇ ಅಥವಾ ಅಂತರ್ಗತ ಭಾಗವೇ ಎಂಬುದನ್ನು ಸಿದ್ಧಾಂತಗಳು, ತತ್ವಗಳು ಮತ್ತು ನಂಬಿಕೆಯನ್ನು ಸಮಗ್ರವಾಗಿ ಪರಿಶೀಲನೆಗೆ ಒಳಪಡಿಸಿ ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ಹಿಂದಿನ ತೀರ್ಪುಗಳು ಹೇಳುತ್ತವೆ. ಯಾವುದೇ ಪದ್ಧತಿ ಧರ್ಮವೊಂದರ ಅಗತ್ಯ ಅಂಶವೇ ಎಂಬುದನ್ನು ಪರಿಶೀಲಿಸಲು ಸಮಗ್ರವಾದ ಪರಿಶೀಲನೆ ಬೇಕೇ ಬೇಕು ಎಂಬುದು ಸ್ಪಷ್ಟ ಎಂದು ನಜೀರ್‌ ಅವರು ಹೇಳಿದ್ದಾರೆ.

ಅಯೋಧ್ಯೆ ಪ್ರಕರಣದಲ್ಲಿ ಅಲಹಾಬಾದ್‌ ಹೈಕೋರ್ಟ್‌ 2010ರಲ್ಲಿ ನೀಡಿದ್ದ ತೀರ್ಪು 1994ರ ತೀರ್ಪಿನಲ್ಲಿ ಅಡಕ ವಾಗಿರುವ ಪ‍್ರಶ್ನಾರ್ಹ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡಿದೆ. 1994ರ ಪ್ರಕರಣ ಭಿನ್ನವಾದ ಹಾದಿ ತುಳಿದಿರುವುದು ಮೇಲ್ನೋಟಕ್ಕೇ ಸ್ಪಷ್ಟ. ಹಾಗಾಗಿ, ಆಚರಣೆಯು ಧರ್ಮಕ್ಕೆ ಅಂತರ್ಗತ ಅಥವಾ ಅಗತ್ಯ ಎಂಬುದನ್ನು ಸಾಂವಿಧಾನಿಕ ಮಹತ್ವ ಕೊಟ್ಟು ಪರಿಶೀಲನೆಗೆ ಒಳಪಡಿಸ ಬೇಕು ಎಂದು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT