ಪಣಜಿ/ಮುಂಬೈ: ಮುಂಬೈಗೆ ಹೊರಟಿದ್ದ ಇಂಡಿಗೊ ವಿಮಾನವೊಂದರ ಎಂಜಿನ್ನಲ್ಲಿ ದೋಷ ಕಾಣಿಸಿಕೊಂಡ ಪರಿಣಾಮ ವಿಮಾನವು ಗೋವಾ ವಿಮಾನ ನಿಲ್ದಾಣಕ್ಕೆ ಮರಳಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಈ ವಿಮಾನದಲ್ಲಿ 187 ಮಂದಿ ಪ್ರಯಾಣಿಕರಿದ್ದರು. ನೌಕಾಪಡೆಯ ರಕ್ಷಣಾ ತಂಡವು ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಕೆಳಗಿಳಿಸಿದೆ ಎಂದು ವಿಮಾನನಿಲ್ದಾಣದ ನಿರ್ದೇಶಕ ಎಸ್.ವಿ.ಟಿ. ಧನಂಜಯ ರಾವ್ ಹೇಳಿದ್ದಾರೆ.
ಈ ವಿಮಾನ ನಿಲ್ದಾಣವು ನೌಕಾಪಡೆಯ ಐಎನ್ಎಸ್ ಹಂಸಾದ ಭಾಗವಾಗಿದೆ.