ನವದೆಹಲಿ: ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವುರ್ ಹುಸೇನ್ ರಾಣಾನನ್ನು ಜೂನ್ 6ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ದೆಹಲಿ ನ್ಯಾಯಾಲಯವು ಶುಕ್ರವಾರ ಈ ಆದೇಶ ನೀಡಿದ್ದು ಜೂ.6ರವರೆಗೂ ರಾಣಾನನ್ನು ತಿಹಾರ್ ಕಾರಾಗೃಹದಲ್ಲಿ ಇರಿಸಲಾಗುವುದು.

ಎನ್ಐಎ ವಶದಲ್ಲಿದ್ದ ರಾಣಾನನ್ನು ಶುಕ್ರವಾರ ಎನ್ಐಎನ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ತನಿಖಾ ಸಂಸ್ಥೆ ಕೋರಿಕೆ ಮೇರೆಗೆ ಆರೋಪಿ ರಾಣಾನನ್ನು ಜೂನ್ 6ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ಮುಂಬೈ ದಾಳಿಯ ಸಂಚುಕೋರನಾದ ಅಮೆರಿಕದ ಪ್ರಜೆ ಡೇವಿಡ್ ಕೋಲ್ಮನ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿಯ ನಿಕಟವರ್ತಿಯಾದ ರಾಣಾನನ್ನು ಅಮೆರಿಕದಿಂದ ಭಾರತಕ್ಕೆ ಕರೆತರಲಾಗಿತ್ತು.

ಏಪ್ರಿಲ್ 11ರಂದು ನ್ಯಾಯಾಲಯವು ರಾಣಾನನ್ನು 18 ದಿನಗಳವರೆಗೆ ಎನ್ಐಎ ವಶಕ್ಕೆ ಒಪ್ಪಿಸಿತ್ತು.
.ಆಳ-ಅಗಲ | ಮುಂಬೈ ದಾಳಿ: ತಹವ್ವುರ್ ಹುಸೇನ್ ರಾಣಾ ಪಾತ್ರವೇನು?.Mumbai Attack: ತಹವ್ವುರ್ ರಾಣಾ ಧ್ವನಿ, ಕೈಬರಹ ದಾಖಲಿಸಲು NIAಗೆ ಕೋರ್ಟ್ ಅನುಮತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.