ತಿರುವನಂತಪುರ: ಬಿಜೆಪಿ ಆಡಳಿತದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪೌರತ್ವ ಕಾಯ್ದೆ ಮತ್ತು ಹೊಸ ವಕ್ಫ್ ಕಾಯ್ದೆಯಂತಹ ಅದರ ವಿವಿಧ ಕಾನೂನುಗಳು ಮತ್ತು ನೀತಿಗಳು ಮುಸ್ಲಿಮರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಪರಿಗಣಿಸುತ್ತವೆ ಹಾಗೂ ಅವರನ್ನು ಮುಖ್ಯವಾಹಿನಿಯಿಂದ ಬೇರ್ಪಡಿಸುತ್ತವೆ ಎಂದು ಆರೋಪಿಸಿದ್ದಾರೆ.

ಜನವರಿ 1ರಂದು ಕಾಸರಗೋಡಿನಲ್ಲಿ ಪ್ರಾರಂಭವಾಗಿ ರಾಜ್ಯದಾದ್ಯಂತ ಸಂಚರಿಸಿ ತಿರುವನಂತಪುರದಲ್ಲಿ ಮುಕ್ತಾಯಗೊಂಡ ಕೇರಳ ಮುಸ್ಲಿಂ ಜಮಾತ್ ಆಯೋಜಿಸಿದ್ದ 'ಕೇರಳ ಯಾತ್ರೆ'ಯ ಸಮಾರೋಪ ಸಮಾವೇಶದಲ್ಲಿ ಮಾತನಾಡಿದ ವಿಜಯನ್, ಈ ಆರೋಪ ಮಾಡಿದ್ದಾರೆ.

ಶುಕ್ರವಾರದ ತಮ್ಮ ಭಾಷಣದಲ್ಲಿ ಮುಖ್ಯಮಂತ್ರಿಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಂತಹ ಅಲ್ಪಸಂಖ್ಯಾತ ಸಮುದಾಯಗಳು ಮತ್ತು ಅವರ ಪೂಜಾ ಸ್ಥಳಗಳ ಮೇಲೆ ದೇಶದಾದ್ಯಂತ ದಾಳಿ ನಡೆಯುತ್ತಿರುವುದರಿಂದ ದೇಶದಲ್ಲಿ ಜಾತ್ಯತೀತತೆ, ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಮೌಲ್ಯಗಳು ಅಪಾಯದಲ್ಲಿವೆ ಎಂದು ಆರೋಪಿಸಿದ್ದಾರೆ.

ಅಂತಹ ಪರಿಸ್ಥಿತಿಯಲ್ಲಿ, ಬಹುಸಂಖ್ಯಾತ ಕೋಮುವಾದ ಮತ್ತು ಅಲ್ಪಸಂಖ್ಯಾತ ಕೋಮುವಾದಗಳ ನಡುವೆ ಸಂಘರ್ಷ ಸೃಷ್ಟಿಸುವ ಬದಲು ಜಾತ್ಯತೀತತೆಯನ್ನು ಬಲಪಡಿಸುವ ಮೂಲಕ ಅವುಗಳ ವಿರುದ್ಧ ಹೋರಾಡಬೇಕಾಗಿದೆ ಎಂದು ಅವರು ಇಲ್ಲಿನ ಪುಥರಿಕಂಡಂ ಮೈದಾನದಲ್ಲಿ ನಡೆದ ದೊಡ್ಡ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಹಿರಿಯ ಕಾಂಗ್ರೆಸ್ ನಾಯಕ ವಿ. ಡಿ. ಸತೀಸನ್ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯನ್, ಯಾವುದೇ ರೀತಿಯ ಕೋಮುವಾದದ ಬಗ್ಗೆ ಮೃದು ನಿಲುವು ಅಥವಾ ತುಷ್ಟೀಕರಣ ತಂತ್ರ ಅಳವಡಿಸಿಕೊಳ್ಳುವುದು ಅಪಾಯಕಾರಿ ಎಂದು ಹೇಳಿದರು.

ಕೇರಳವು ಹಿಂದೆ ಹಲವು ಕೋಮು ಸಂಘರ್ಷಗಳು ಮತ್ತು ಗಲಭೆಗಳನ್ನು ಕಂಡಿದೆ. ಆದರೆ, ಯಾವುದೇ ರೀತಿಯ ಕೋಮುವಾದದ ವಿರುದ್ಧ ಎಲ್ಡಿಎಫ್ ಅಳವಡಿಸಿಕೊಂಡ ಬಲವಾದ, ರಾಜಿಯಾಗದ ನಿಲುವಿನಿಂದಾಗಿ ಅವೆಲ್ಲವೂ ಕೊನೆಗೊಂಡಿದೆ ಎಂದು ವಿಜಯನ್ ಹೇಳಿದರು.

ಧರ್ಮ, ಜನಾಂಗ, ಜಾತಿ ಅಥವಾ ಭಾಷೆಯ ಮೂಲಕ ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಶಕ್ತಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಅವರು ಕರೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.