ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ತಿಗೆ ಹಾಜರಾಗದ ಸಚಿವರ ಪಟ್ಟಿ ಕೊಡಿ ಎಂದ ಪ್ರಧಾನಿ ಮೋದಿ 

Last Updated 16 ಜುಲೈ 2019, 12:59 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್ ಕಲಾಪಗಳಿಗೆ ಹಾಜರಾಗದಿರುವಸಚಿವರ ಪಟ್ಟಿ ಕೊಡಿ ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ.

ಸಂಸತ್ತಿಗೆ ಹಾಜರಾಗದೇ ಇರುವ ಸಚಿವರ ಹೆಸರನ್ನು ಪಟ್ಟಿ ಮಾಡಿ, ಆ ಪಟ್ಟಿಯನ್ನುಪ್ರತೀ ದಿನಸಂಜೆಯೊಳಗೆ ನೀಡಬೇಕು ಎಂದುಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿಯವರಲ್ಲಿಮೋದಿ ಹೇಳಿದ್ದಾರೆ.ಬಿಜೆಪಿ ಸಂಸದೀಯ ಪಕ್ಷದ ವಾರದ ಸಭೆ ನಂತರ ಮೋದಿ ಈ ಆದೇಶ ನೀಡಿದ್ದಾರೆ.

ಸಭೆಯಲ್ಲಿ ಸಂಸದರನ್ನುದ್ದೇಶಿಸಿ ಮಾತನಾಡಿದ ಮೋದಿ,ರಾಜಕೀಯದ ಚೌಕಟ್ಟು ಮೀರಿ ಕೆಲಸ ಮಾಡಬೇಕು ಎಂದುಸಂಸದರಿಗೆ ಹೇಳಿದ್ದಾರೆ. ದೇಶದಲ್ಲಿನ ಜಲಕ್ಷಾಮದ ಬಗ್ಗೆ ಉಲ್ಲೇಖಿಸಿದ ಅವರು ಸಂಸದರು ಅವರವರಚುನಾವಣಾ ಕ್ಷೇತ್ರಗಳಿಗೆ ಹೋಗಿ ಅಲ್ಲಿನ ಅಧಿಕಾರಿಗಳೊಂದಿಗೆ ಕುಳಿತು ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು ಎಂದಿದ್ದಾರೆ.

ಸಂಸದರು ಅವರವರ ಚುನಾವಣಾ ಕ್ಷೇತ್ರದಲ್ಲಿ ವಿಶಿಷ್ಟವಾದಕೆಲಸಗಳನ್ನು ಮಾಡಬೇಕು. ಅಲ್ಲಿನ ಸ್ಥಳೀಯ ಆಡಳಿತಕಾರರೊಂದಿಗೆ ಕೆಲಸ ಮಾಡುವುದಲ್ಲದೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು.ಕ್ಷಯ ಮತ್ತು ಕುಷ್ಠ ರೋಗವನ್ನು ದೇಶದಿಂದ ಮುಕ್ತಗೊಳಿಸುವುದಕ್ಕಾಗಿ ಸಂಸದರು ಕಾರ್ಯ ಪ್ರವೃತ್ತರಾಗಬೇಕು ಎಂದು ಮೋದಿ ಕರೆ ನೀಡಿದ್ದಾರೆ.

ಈ ಹಿಂದೆ ನಡೆದ ಸಂಸದೀಯ ಪಕ್ಷದಸಭೆಯಲ್ಲಿ ಮಾತನಾಡಿದ ಮೋದಿ, ಬಿಜೆಪಿ ನೇತಾರ ಕೈಲಾಶ್ ವಿಜಯ್ ವರ್ಗಿಯಾ ಅವರ ಪುತ್ರ ಆಕಾಶ್ ವರ್ಗಿಯಾ ಅವರ ಕೃತ್ಯವನ್ನು ಖಂಡಿಸಿದ್ದರು. ಈ ರೀತಿಯಕೃತ್ಯವೆಸಗಿದವರು ಯಾರೇ ಆದರೂ, ಯಾರ ಮಗನೇ ಆಗಿದ್ದರೂ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಮೋದಿ ಗುಡುಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT