ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಛತ್ತೀಸಗಢದಲ್ಲಿ ನಕ್ಸಲ್ ಹತ್ಯೆ

Published 23 ಜೂನ್ 2024, 16:45 IST
Last Updated 23 ಜೂನ್ 2024, 16:45 IST
ಅಕ್ಷರ ಗಾತ್ರ

ಧಮ್ತರಿ: ಛತ್ತೀಸಗಢದ ಧಮ್ತರಿ ಜಿಲ್ಲೆಯಲ್ಲಿ ಭಾನುವಾರ ಭದ್ರತಾ ಪಡೆಯವರು ನಕ್ಸಲ್ ಒಬ್ಬನನ್ನು ಗುಂಡೇಟಿನಿಂದ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಮುಹ್‌ಕೋಟ್–ಆಮ್‌ಝರ್ ಹಳ್ಳಿಗಳ ಬಳಿಯ ಅರಣ್ಯ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಗುಂಡಿನ ಚಕಮಕಿ ನಡೆಯಿತು. ಜಿಲ್ಲಾ ಮೀಸಲು ದಳ (ಡಿಆರ್‌ಜಿ)ದ ತಂಡದವರು  ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸಿದಾಗ ನಡೆದ ಚಕಮಕಿಯಲ್ಲಿ ನಕ್ಸಲ್ ಹತನಾದ. ಇದುವರೆಗೆ 133 ನಕ್ಸಲರನ್ನು ಛತ್ತೀಸಗಢದಲ್ಲಿ ಹತ್ಯೆ ಮಾಡಿದಂತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT