ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಸಿಇಆರ್‌ಟಿ ಕ್ರಮ ಐತಿಹಾಸಿಕ ಸಂಗತಿ ಅಳಿಸುವ ಕೆಲಸ: ಕೇರಳ

Published 6 ಏಪ್ರಿಲ್ 2024, 16:06 IST
Last Updated 6 ಏಪ್ರಿಲ್ 2024, 16:06 IST
ಅಕ್ಷರ ಗಾತ್ರ

ತಿರುವನಂತಪುರ: ಬಾಬರಿ ಮಸೀದಿ ಧ್ವಂಸ ಹಾಗೂ ಗುಜರಾತ್‌ ಗಲಭೆಗಳಲ್ಲಿ ಮುಸ್ಲಿಮರ ಹತ್ಯೆಯ ಕುರಿತ ಉಲ್ಲೇಖಗಳನ್ನು ಕೈಬಿಡಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಕೈಗೊಂಡ ತೀರ್ಮಾನವನ್ನು ಟೀಕಿಸಿರುವ ಕೇರಳ ಸರ್ಕಾರ, ‘ಇದು ಪಠ್ಯಪುಸ್ತಕಗಳಿಂದ ಐತಿಹಾಸಿಕ ಸಂಗತಿಗಳನ್ನು’ ಅಳಿಸುವ ಕೆಲಸ ಎಂದು ದೂರಿದೆ.

ಈ ವಿಚಾರದಲ್ಲಿ ಕೇರಳದ ನಿಲುವು ದೃಢವಾಗಿದೆ ಎಂದು ಅಲ್ಲಿನ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಹೇಳಿದ್ದಾರೆ. ‘ಎನ್‌ಸಿಇಆರ್‌ಟಿ ಈ ಹಿಂದೆಯೂ ಇಂಥದ್ದೇ ಯತ್ನ ನಡೆಸಿತ್ತು. ಇತಿಹಾಸ, ಸಮಾಜ ವಿಜ್ಞಾನ ಮತ್ತು ರಾಜ್ಯಶಾಸ್ತ್ರದ ಪಠ್ಯಪುಸ್ತಕಗಳಿಂದ ಕೆಲವು ಅಂಶಗಳನ್ನು ಕೈಬಿಟ್ಟಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಕೇರಳ ಸರ್ಕಾರವು, ಕೈಬಿಟ್ಟ ಅಂಶಗಳನ್ನು ಒಳಗೊಂಡ ಹೆಚ್ಚುವರಿ ಪಠ್ಯಪುಸ್ತಕವನ್ನು ಆಗ ಮುದ್ರಿಸಿತ್ತು’ ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT