ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕತಾವಾದಿಗಳ ಮೇಲೆ ಎನ್‌ಐಎ ದಾಳಿ

Last Updated 26 ಫೆಬ್ರುವರಿ 2019, 19:35 IST
ಅಕ್ಷರ ಗಾತ್ರ

ಶ್ರೀನಗರ: ಉಗ್ರರಿಗೆ ಹಣಕಾಸಿನ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮಂಗಳವಾರ ಪ್ರತ್ಯೇಕತಾವಾದಿ ನಾಯಕರ ಸ್ಥಳಗಳ ಮೇಲೆ ದಾಳಿ ನಡೆಸಿತು.

ಸ್ಥಳೀಯ ಪೊಲೀಸರು ಮತ್ತು ಸಿಆರ್‌ಪಿಎಫ್‌ ಯೋಧರ ಬೆಂಗಾವಲಿನೊಂದಿಗೆ ಒಂಬತ್ತು ಸ್ಥಳಗಳಲ್ಲಿ ಈ ಕಾರ್ಯಾಚರಣೆ ನಡೆಯಿತು.

ಮಿರ್ವಾಜ್‌ ಉಮರ್‌ ಫಾರೂಖ್‌, ಸಯ್ಯದ್‌ ಅಲಿ ಶಾ ಗಿಲಾನಿ ಪುತ್ರ ನಯೀಮ್‌ ಗಿಲಾನಿ, ಜೆಕೆಎಲ್‌ಎಫ್‌ ನಾಯಕ ಯಾಸೀನ್‌ ಮಲಿಕ್‌, ಶಬೀರ್‌ ಶಾ, ಅಶ್ರಫ್‌ ಸೆಹ್ರಾ ಮತ್ತು ಜಫರ್‌ ಭಟ್‌ ಅವರ ಮನೆಗಳ ಮೇಲೆ ದಾಳಿ ಕೈಗೊಳ್ಳಲಾಯಿತು.

ಹವಾಲಾ ಮೂಲಕ ಪಾಕಿಸ್ತಾನದಿಂದ ಪ್ರತ್ಯೇಕತಾವಾದಿ ನಾಯಕರು ಹಣ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಯಿತು.

ಎನ್‌ಐಎ ದಾಳಿ ವಿರೋಧಿಸಿ ಸ್ಥಳೀಯ ಕೆಲ ಯುವಕರು ನಡೆಸಿದ ಕಲ್ಲು ತೂರಾಟಕ್ಕೆ ಪ್ರತ್ಯುತ್ತರವಾಗಿ ಪೊಲೀಸರು ಅಶ್ರುವಾಯು ಸಿಡಿಸಿ ಚದುರಿಸಿದರು.

ಬಂದ್‌ಗೆ ಕರೆ: ಎನ್‌ಐಎ ದಾಳಿ ವಿರೋಧಿಸಿ ಪ್ರತ್ಯೇಕತಾವಾದಿ ನಾಯಕರು ಎರಡು ದಿನಗಳ ಕಾಶ್ಮೀರ ಬಂದ್‌ಗೆ ಕರೆ ನೀಡಿದ್ದಾರೆ.

ಐಎಸ್‌ ಪರ ಅನುಕಂಪ: ಆರೋಪಪಟ್ಟಿ ಸಲ್ಲಿಕೆ

ನವದೆಹಲಿ: ಐಎಸ್‌ ಉಗ್ರ ಸಂಘಟನೆ ಪರ ಅನುಕಂಪ ಹೊಂದಿದ ಕೊಯಮತ್ತೂರಿನ ಆರು ಮಂದಿ ವಿರುದ್ಧ ಎನ್‌ಐಎ ಆರೋಪಪಟ್ಟಿ ಸಲ್ಲಿಸಿದೆ.

ಕೊಯಮತ್ತೂರಿನಲ್ಲಿ ಹಿಂದೂ ನಾಯಕರು ಮತ್ತು ಕಾರ್ಯಕರ್ತರ ಮೇಲೆ ದಾಳಿ ನಡೆಸಲು ಈ ಆರು ಮಂದಿ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ 1ರಂದು ಇವರನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT