ನವದೆಹಲಿ: ಪಂಜಾಬ್‌ನ ಫೆರೋಜ್‌ಪುರದಲ್ಲಿರುವ, ಖಾಲಿಸ್ತಾನಿ ಉಗ್ರ ರಾಮ್‌ದೀಪ್ ಸಿಂಗ್‌ಗೆ ಸೇರಿದ ಸ್ಥಿರಾಸ್ತಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ಮುಟ್ಟುಗೋಲು ಹಾಕಿಕೊಂಡಿದೆ.

‘ಎನ್‌ಐಎ ನ್ಯಾಯಾಲಯದ ನಿರ್ದೇಶನದ ಅನ್ವಯ ಆರೋಪಿಗೆ ಸಂಬಂಧಿಸಿದ, ಝೋಕ್ ನೋದ್ ಗ್ರಾಮದಲ್ಲಿದ್ದ ಸುಮಾರು 4.5 ಎಕರೆಯಷ್ಟು ಜಾಗವನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಎನ್‌ಐಎ ಪ್ರಕಟಣೆ ತಿಳಿಸಿದೆ.

‘ಖಾಲಿಸ್ತಾನ ಪರ ಭಯೋತ್ಪಾದಕ ಸಂಘಟನೆಗಳಾದ ಖಾಲಿಸ್ತಾನ ಲಿಬರೇಷನ್ ಫ್ರಂಟ್ (ಕೆಎಲ್‌ಎಫ್), ಬಾಬರ್ ಖಾಲ್ಸಾ ಇಂಟರ್‌ನ್ಯಾಷನಲ್ (ಬಿಕೆಐ) ಮತ್ತು ಅಂತರರಾಷ್ಟ್ರೀಯ ಸಿಖ್ ಯುವ ಘಟಕದ (ಐಎಸ್‌ವೈಎಫ್) ನಾಯಕರು ಮತ್ತು ಸದಸ್ಯರ ಜತೆ ನಂಟು ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿ ರಾಮ್‌ದೀಪ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದೆ.

2023 ಜುಲೈ 27ರಂದು ನ್ಯಾಯಾಲಯವು ರಾಮ್‌ದೀಪ್‌ನನ್ನು ಅಪರಾಧಿಯೆಂದು ಘೋಷಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.