ನವದೆಹಲಿ: ನಿರ್ಭಯಾ ಪ್ರಕರಣದ ಅಪರಾಧಿ ವಿನಯ್‌ಕುಮಾರ್ ಶರ್ಮಾಗೆ ಚಿಕಿತ್ಸೆ ನೀಡುವ ಕುರಿತು ವಿವರಣೆ ನೀಡುವಂತೆ ದೆಹಲಿ ನ್ಯಾಯಾಲಯವುತಿಹಾರ್ ಜೈಲು ಅಧಿಕಾರಿಗಳಿಗೆ ಸೂಚಿಸಿದೆ.

ಅಪರಾಧಿ ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದಾನೆ. ಅಲ್ಲದೆ, ತಲೆ ಮತ್ತು ತೋಳಿಗೆ ಗಾಯಗಳಾಗಿದ್ದು, ಚಿಕಿತ್ಸೆ ಒದಗಿಸುವಂತೆ ಕೋರಿ ಶರ್ಮಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಧರ್ಮೇಂದರ್ ರಾಣಾ ಅವರು, ಶನಿವಾರ ವಿವರಣೆ ನೀಡುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜೈಲು ಗೋಡೆಗೆ ತಲೆಯನ್ನು ಚಚ್ಚಿಕೊಳ್ಳುವುದರ ಮೂಲಕ ಗಾಯಗೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತನ್ನನ್ನು ನೋಡಲು ಬಂದ ತಾಯಿಯನ್ನು ಗುರುತಿಸಲು ವಿಫಲನಾಗಿದ್ದು, ಆತನ ತಲೆಗೂ ಪೆಟ್ಟಾಗಿದೆ. ಚಿಕಿತ್ಸೆ ನೀಡಲು ಅವಕಾಶ ನೀಡಬೇಕು ಎಂದು ಅಪರಾಧಿ ಪರ ವಕೀಲರು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.