ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಪೇ’ಗೆ ಅನುಮತಿಯೇ ಇಲ್ಲ: ದೆಹಲಿ ಹೈಕೋರ್ಟ್‌

Last Updated 10 ಏಪ್ರಿಲ್ 2019, 19:17 IST
ಅಕ್ಷರ ಗಾತ್ರ

ನವದೆಹಲಿ: ಪರವಾನಗಿ ಇಲ್ಲದೆಯೇ ಗೂಗಲ್‌ನ ಮೊಬೈಲ್‌ ಪಾವತಿಸುವ ಆ್ಯಪ್‌ ‘ಜಿಪೇ’ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಅನ್ನು ದೆಹಲಿ ಹೈಕೋರ್ಟ್‌ ಪ್ರಶ್ನಿಸಿದೆ.

ಈ ಬಗ್ಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್‌ ಮತ್ತು ನ್ಯಾಯಮೂರ್ತಿ ಎ.ಜೆ. ಭಂಭಾನಿ ಅವರು, ಭಾರತೀಯ ರಿಸರ್ವ್‌ ಬ್ಯಾಂಕ್‌ ಮತ್ತು ಗೂಗಲ್‌ ಇಂಡಿಯಾಗೆ ವಿವರಣೆ ನೀಡುವಂತೆ ನೋಟಿಸ್‌ ಜಾರಿಗೊಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಗೂಗಲ್‌ ಇಂಡಿಯಾ, ‘ಎಲ್ಲ ಕಾನೂನುಬದ್ಧ ಅಗತ್ಯಗಳನ್ನು ಗೂಗಲ್‌ ಪೇ ಪೂರೈಸಿದೆ. ಬ್ಯಾಂಕ್‌ಗಳಿಗೆ ತಂತ್ರಜ್ಞಾನ ಸೇವೆ ಒದಗಿಸುವ ಮೂಲಕ ಸಹಭಾಗಿತ್ವದ ರೀತಿಯಲ್ಲಿ ಗೂಗಲ್‌ ಪೇ ಕಾರ್ಯನಿರ್ವಹಿಸುತ್ತದೆ. ಹಣ ಪಾವತಿಸುವ ಅಥವಾ ಇತ್ಯರ್ಥಗೊಳಿಸುವ ಭಾಗವಾಗಿ ಕಾರ್ಯನಿರ್ವಹಿಸುವುದಿಲ್ಲ’ ಎಂದು ತಿಳಿಸಿದೆ.

ಯಾಸಿನ್ ಮಲಿಕ್ ಎನ್‌ಐಎ ವಶಕ್ಕೆ

ನವದೆಹಲಿ:ಉಗ್ರರಿಗೆ ಹಣಕಾಸಿನ ನೆರವು ನೀಡಿದ ಆರೋಪ ಎದುರಿಸುತ್ತಿರುವ ಜೆಕೆಎಲ್‌ಎಫ್‌ ಮುಖ್ಯಸ್ಥ ಯಾಸಿನ್‌ ಮಲಿಕ್‌ ಅವರನ್ನುದೆಹಲಿ ನ್ಯಾಯಾಲಯ ಏ.22ರವರೆಗೂ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಶಕ್ಕೆ ನೀಡಿದೆ.

ಭಾರತ– ಪಾಕ್‌ ನಡುವೆ ಮಾತುಕತೆ ಅಗತ್ಯ’

ಇಸ್ಲಾಮಾಬಾದ್‌ (ಪಿಟಿಐ): ಭಾರತ ಮತ್ತು ಪಾಕಿಸ್ತಾನದ ಬಾಂಧವ್ಯ ಸುಧಾರಣೆಗೆ ಎರಡೂ ರಾಷ್ಟ್ರಗಳು ಮಾತುಕತೆ ನಡೆಸುವುದೊಂದೇ ಮಾರ್ಗ ಎಂದು ವಿದೇಶಾಂಗ ಖಾತೆ ಸಚಿವ ಷಾ ಮಹಮ್ಮದ್‌ ಖುರೇಷಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT