ನವದೆಹಲಿ: ಕೇಂದ್ರೀಯ ವಿದ್ಯಾಲಯಗಳ ಪ್ರವೇಶಾತಿಯಲ್ಲಿ ಸಂಸದರ ಕೋಟಾವನ್ನು ಮರು ಜಾರಿಗೊಳಿಸುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಈ ವಿಷಯ ತಿಳಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ–2020ರ ದೂರದೃಷ್ಟಿಯಂತೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಅನುಪಾತ(ಪಿಟಿಆರ್) ಮತ್ತು ಕಲಿಕೆಯ ಗುಣಮಟ್ಟ ಕಾಪಾಡಲು ಕೇಂದ್ರ ಸರ್ಕಾರ 2022ರಲ್ಲೇ ಸಂಸದರ ಕೋಟಾ ರದ್ದು ಮಾಡಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಕೇಂದ್ರೀಯ ವಿದ್ಯಾಲಯಗಳಲ್ಲಿ ಲೋಕಸಭೆ ಸದಸ್ಯರ ಕೋಟಾದಡಿ ಪ್ರವೇಶ ಅವಕಾಶ ಇತ್ತು. ಸಂಸದರು 10 ಮಕ್ಕಳ ಪ್ರವೇಶಕ್ಕೆ ಶಿಫಾರಸು ಮಾಡುವ ವಿವೇಚನಾಧಿಕಾರ ಹೊಂದಿದ್ದರು. ಜಿಲ್ಲಾಧಿಕಾರಿಗಳು 17 ವಿದ್ಯಾರ್ಥಿಗಳ ಪ್ರವೇಶಕ್ಕೆ ಶಿಫಾರಸು ಮಾಡಬಹುದಿತ್ತು.

ಲೋಕಸಭೆಯ 543 ಸದಸ್ಯರು , ರಾಜ್ಯಸಭೆಯ 245 ಸದಸ್ಯರು ಸೇರಿ ವರ್ಷಕ್ಕೆ 7,880 ಮಕ್ಕಳ ಪ್ರವೇಶಕ್ಕೆ ಈ ಕೋಟಾದಡಿ ಶಿಫಾರಸು ಮಾಡಬಹುದಿತ್ತು.

ಇದು ಮಂಜೂರಾದ ಮಕ್ಕಳ ಸಂಖ್ಯೆಯನ್ನು ಮೀರುತ್ತದೆ ಮತ್ತು ಮಕ್ಕಳ ಕಲಿಕೆ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಕಾರಣ ನೀಡಿ ಕೇಂದ್ರೀಯ ವಿದ್ಯಾಲಯ ಸಂಘಟನೆಯು ಈ ವಿಶೇಷ ಅವಕಾಶವನ್ನು 2022ರಲ್ಲಿ ಸ್ಥಗಿತಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.