ಸಾಹಿತ್ಯ, ರಾಜಕೀಯ, ಸಾಮಾಜಿಕ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಲವು ಗಣ್ಯರು ಈ ವರ್ಷ ನಮ್ಮನ್ನಗಲಿದ್ದಾರೆ. ಪ್ರಮುಖರ ವಿವರ ಇಲ್ಲಿದೆ

ಪ್ರೀತಿಶ್ ನಂದಿ: ಪತ್ರಕರ್ತ, ಕವಿ, ಚಿತ್ರ ನಿರ್ಮಾಪಕರಾಗಿದ್ದ ಪ್ರೀತಿಶ್ ನಂದಿ (73) ಅವರು ಜನವರಿ 8ರಂದು ನಿಧನರಾದರು. ರಾಜ್ಯಸಭಾ ಸದಸ್ಯರಾಗಿದ್ದ ಪ್ರೀತೀಶ್ ಪ್ರಾಣಿ ಹಕ್ಕುಗಳ ಪರ ವಕೀಲರಾಗಿದ್ದರು.

ಪೋಪ್ ಫ್ರಾನ್ಸಿಸ್: ಪೋಪ್ ಹುದ್ದೆಗೇರಿದ ಲ್ಯಾಟಿನ್ ಅಮೆರಿಕದ ಮೊದಲ ಧರ್ಮಗುರು ಎಂಬ ಖ್ಯಾತಿಗೆ ಪಾತ್ರರಾಗಿದ್ದ ಪೋಪ್ ಫ್ರಾನ್ಸಿಸ್ (88) ಅವರು ಏಪ್ರಿಲ್ 21ರಂದು ಕೊನೆಯುಸಿರೆಳೆದರು. ವಿನಮ್ರ ವ್ಯಕ್ತಿತ್ವ, ಬಡವರ ಬಗ್ಗೆ ಹೊಂದಿದ್ದ ಅಪಾರ ಕಾಳಜಿಯಿಂದ ಜಗತ್ತಿನಾದ್ಯಂತ ಅವರು ಮನ್ನಣೆಗಳಿಸಿದ್ದರು

ಡಾ.ಎಂ.ಆರ್ ಶ್ರೀನಿವಾಸನ್: ದೇಶದ ಅಣು ಶಕ್ತಿ ಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಡಾ.ಎಂ.ಆರ್ ಶ್ರೀನಿವಾಸನ್ (95) ಅವರು ಮೇ 20ರಂದು ನಿಧನರಾದರು. ಅಣುಶಕ್ತಿ ಶಕ್ತಿ ಆಯೋಗದ (ಎಆರ್ಸಿ) ಅಧ್ಯಕ್ಷರಾಗಿ, ಅಣುಶಕ್ತಿ ಶಕ್ತಿ ವಿಭಾಗದ ಕಾರ್ಯದರ್ಶಿಯಾಗಿ ಕೊಡುಗೆ ನೀಡಿದ್ದ ಇವರಿಗೆ ಭಾರತೀಯ ಅಣು ಶಕ್ತಿ ನಿಗಮವನ್ನು (ಎನ್ಪಿಸಿಐಎಲ್) ಹುಟ್ಟುಹಾಕಿದ ಶ್ರೇಯ ಕೂಡ ಸಂದಿತ್ತು

ವಾಲ್ಮೀಕ್ ಥಾಪರ್: ದೇಶದ ವನ್ಯಜೀವಿ ಸಂರಕ್ಷಕರಲ್ಲಿ ಪ್ರಮುಖರಾಗಿದ್ದ ವಾಲ್ಮೀಕ್ ಥಾಪರ್(73) ಅವರು ಮೇ 31ರಂದು ಕೊನೆ ಉಸಿರೆಳೆದರು. ಅವರು ಲೇಖಕರಾಗಿಯೂ ಚಿರಪರಿಚಿತರಾಗಿದ್ದರು

ವಿಜಯ್ ರೂಪಾನಿ: ಬಿಜೆಪಿ ಮುಖಂಡ, ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ(68) ಅವರು ಜೂನ್ 12ರಂದು ಏರ್ ಇಂಡಿಯಾ ವಿಮಾನ ದುರಂತದಲ್ಲಿ ಕೊನೆ ಉಸಿರೆಳೆದರು

ವಿ.ಎಸ್.ಅಚ್ಯುತಾನಂದನ್: ಕೇರಳದ ಮಾಜಿ ಮುಖ್ಯಮಂತ್ರಿ, ಸಿಪಿಎಂನ ಹಿರಿಯ ನಾಯಕ ವಿ.ಎಸ್.ಅಚ್ಯುತಾನಂದನ್ (101 ವರ್ಷ) ಅವರು ಜುಲೈ 21ರಂದು ನಿಧನರಾದರು

ಶಿಬು ಸೊರೇನ್: ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ರಾಜಕೀಯ ಪಕ್ಷದ ಸಂಸ್ಥಾಪಕ ಶಿಬು ಸೊರೇನ್ (81) ಅವರು ಆಗಸ್ಟ್ 4ರಂದು ನಿಧನ ಹೊಂದಿದರು

ಸತ್ಯಪಾಲ್ ಮಲಿಕ್: ಜಮ್ಮು ಮತ್ತು ಕಾಶ್ಮೀರ, ಗೋವಾ ಮತ್ತು ಮೇಘಾಲಯದ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲಿಕ್(79) ಆಗಸ್ಟ್ 5ರಂದು ನಿಧನ ಹೊಂದಿದರು.

ಫ್ರಾಂಕ್ ಕೆಪ್ರಿಯೋ: ಮಾನವೀಯತೆ ಆಧಾರದಲ್ಲಿ ಪ್ರಕರಣಗಳನ್ನು ವಿಲೇವಾರಿ ಮಾಡುವ ಮೂಲಕ ಜಗತ್ತಿನ ಅತ್ಯಂತ ಸಹೃದಯಿ ನ್ಯಾಯಾಧೀಶ ಎಂದೇ ಖ್ಯಾತರಾಗಿದ್ದ ಅಮೆರಿಕದ ರೋಡ್ ಐಲೆಂಡ್ನ ಮುನ್ಸಿಪಲ್ ಕೋರ್ಟ್ನ ಮುಖ್ಯ ನ್ಯಾಯಾಧೀಶ ಫ್ರಾಂಕ್ ಕ್ಯಾಪ್ರಿಯೊ (80) ಅವರು ಆಗಸ್ಟ್ 20ರಂದು ನಿಧನರಾದರು.

ಜುಬೀನ್ ಗರ್ಗ್: ಅಸ್ಸಾಮಿ ಖ್ಯಾತ ಗಾಯಕ ಜುಬೀನ್ ಗರ್ಗ್(52) ಸೆಪ್ಟೆಂಬರ್ 19ರಂದು ಮೃತಪಟ್ಟರು. ಕಾರ್ಯಕ್ರಮವೊಂದರ ನಿಮಿತ್ತ ಸಿಂಗಪುರಕ್ಕೆ ತೆರಳಿದ್ದ ಅವರು ಈಜಲು ತೆರಳಿದ್ದ ವೇಳೆ ಅನುಮಾನಾಸ್ಪದವಾಗಿ ಸಾವಿಗೀಡಾದರು. ಅಸ್ಸಾಮಿ, ಹಿಂದಿ, ಬಂಗಾಳಿ ಸೇರಿದಂತೆ ವಿವಿಧ ಭಾಷೆಗಳಲ್ಲಿ 38 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದ ಅವರು ಭಾರಿ ಜನ ಮನ್ನಣೆಗಳಿಸಿದ್ದರು. ಅವರನ್ನು ಕೊಲೆ ಮಾಡಲಾಗಿದೆ ಎಂಬುದು ತನಿಖೆಯಿಂದ ದೃಢಪಟ್ಟಿದೆ ಎಂದು ಅಸ್ಸಾಂ ಸರ್ಕಾರ ಹೇಳಿತ್ತು.

ಪೀಯೂಷ್ ಪಾಂಡೆ: ದೇಶದ ಜಾಹೀರಾತು ಲೋಕಕ್ಕೆ ವಿಶೇಷ ಮೆರುಗು ತುಂಬಿದ್ದ ಪದ್ಮಶ್ರೀ ಪುರಸ್ಕೃತ ಪೀಯೂಷ್ ಪಾಂಡೆ (70) ಅವರು ಅಕ್ಟೋಬರ್ 24ರಂದು ನಿಧನ ಹೊಂದಿದರು

ಧರ್ಮೇಂದ್ರ: ಹಿಂದಿ ಚಿತ್ರರಂಗದ ಸ್ಫುರದ್ರೂಪಿ ನಟ ಧರ್ಮೇಂದ್ರ ಅವರು ನವೆಂಬರ್ 24ರಂದು ತಮ್ಮ 89ನೇ ವಯಸ್ಸಿನಲ್ಲಿ ನಿಧನರಾದರು. ಆರು ದಶಕಗಳ ಸಿನಿಮಾ ವೃತ್ತಿ ಬದುಕಿನಲ್ಲಿ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಅವರು ರಾಜಕಾರಣಿಯೂ ಆಗಿದ್ದರು

ಶಿವರಾಜ್ ಪಾಟೀಲ್: ಕೇಂದ್ರ ಸರ್ಕಾರದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಶಿವರಾಜ್ ಪಾಟೀಲ್ (90) ಅವರು ಡಿಸೆಂಬರ್ 12ರಂದು ನಿಧನ ಹೊಂದಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.