ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇನಕಾ ಹೇಳಿಕೆಗೆ ಆಯೋಗದ ಎಚ್ಚರಿಕೆ

menaka
Last Updated 29 ಏಪ್ರಿಲ್ 2019, 18:29 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು‘ನನಗೆ ಮತ ಹಾಕದಿದ್ದರೆ ಸರಿಯಿರುವುದಿಲ್ಲ’ ಎಂದು ಬೆದರಿಸಿದ್ದ ಹೇಳಿಕೆಯನ್ನು ಚುನಾವಣಾ ಆಯೋಗ ಖಂಡಿಸಿದೆ. ಮುಂದೆ ಇಂತಹ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ನೀಡಿ ಪ್ರಕರಣವನ್ನು ಕೈಬಿಟ್ಟಿದೆ.

ಈ ಸಂಬಂಧ ಸೋಮವಾರ ಆದೇಶ ಹೊರಡಿಸಿರುವ ಚುನಾವಣಾ ಆಯೋಗ,ಕಾನೂನು ಬಾಹಿರ ನಡವಳಿಕೆ ಬಗ್ಗೆ ಎಚ್ಚರಿಕೆ ರವಾನಿಸಿದೆ.

ಮೇನಕಾ ಅವರಿಗೆ 48 ತಾಸು ಚುನಾವಣಾ ಪ್ರಚಾರ ನಿರ್ಬಂಧವನ್ನು ಆಯೋಗ ಈ ಮೊದಲು ಹೇರಿತ್ತು. ಏಪ್ರಿಲ್ 14ರಂದು ಸುಲ್ತಾನ್‌ಪುರ ಕ್ಷೇತ್ರದ ತರುಬ್ ಖಾನಿ ಗ್ರಾಮದಲ್ಲಿ ಮುಸ್ಲಿಂ ಮತದಾರರನ್ನು ಉದ್ದೇಶಿಸಿ ಮಾತನಾಡಿದ್ದ ಮೇನಕಾ, ‘ನನಗೆ ಮತ ಹಾಕದಿದ್ದರೆ, ನಿಮಗೆ ಏನೂ ಸಹಾಯ ಮಾಡುವುದಿಲ್ಲ’ ಎಂದಿದ್ದರು.

ಅಲ್ಲದೇ ಸರ್ಕೋಡಾದಲ್ಲಿ ಮಾತನಾಡಿದ್ದ ಅವರು, ಪಿಲಿಭಿತ್‌ನಲ್ಲಿ ತಾವು ರೂಪಿಸಿದ್ದ ಪದ್ಧತಿಯನ್ನೇ ಜಾರಿಗೊಳಿಸುವುದಾಗಿ ಹೇಳಿದ್ದರು.ಇದನ್ನೂ ಆಯೋಗ ಖಂಡಿಸಿದೆ.ತಮಗೆ ಸಿಕ್ಕ ಮತಗಳ ಆಧಾರದಲ್ಲಿ ಗ್ರಾಮಗಳನ್ನು ಎ, ಬಿ, ಸಿ, ಡಿ ಶ್ರೇಣಿಗಳಲ್ಲಿ ವಿಂಗಡಿಸಿ, ಹೆಚ್ಚು ಮತ ನೀಡಿದ ಹಳ್ಳಿಗಳಿಗೆ ಅಭಿವೃದ್ಧಿ ಕೆಲಸಗಳಲ್ಲಿ ಆದ್ಯತೆ ನೀಡುವ ಪದ್ಧತಿಯನ್ನು ಅನುಸರಿಸಲಾಗುವುದು ಎಂದು ಮೇನಕಾ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT