ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುತೇಕ ವೈಜ್ಞಾನಿಕ ಸಂಸ್ಥೆಗಳ ಸ್ಥಾಪನೆಯಲ್ಲಿ ನೆಹರೂ ಪಾತ್ರವಿಲ್ಲ –ತೇಜಸ್ವಿ ಸೂರ್ಯ

Published 21 ಸೆಪ್ಟೆಂಬರ್ 2023, 15:26 IST
Last Updated 21 ಸೆಪ್ಟೆಂಬರ್ 2023, 15:26 IST
ಅಕ್ಷರ ಗಾತ್ರ

ನವದೆಹಲಿ: ‘ದೇಶದ ಬಹುತೇಕ ವೈಜ್ಞಾನಿಕ ಸಂಸ್ಥೆಗಳನ್ನು ಸ್ವಾತಂತ್ರ್ಯಪೂರ್ವದಲ್ಲಿನ ಜನರು ಆರಂಭಿಸಿದ್ದಾರೆ. ಇವುಗಳ ಸ್ಥಾಪನೆಯಲ್ಲಿ ಮಾಜಿ ಪ್ರಧಾನಿ ಜವಹರಲಾಲ್‌ ನೆಹರೂ ಅವರ ಯಾವುದೇ ಪಾತ್ರವಿಲ್ಲ’ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪ್ರತಿಪಾದಿಸಿದ್ದಾರೆ.

‘ಚಂದ್ರಯಾನ–3‘ ಮಿಷನ್‌ ಕುರಿತ ಸಂವಾದದಲ್ಲಿ ಭಾಗವಹಿಸಿದ್ದ ಅವರು, ವಿರೋಧಪಕ್ಷಗಳು ಈಗ ‘ಇಸ್ರೊ ಭಜನೆ’ಗೆ ಬದಲಾಗಿ ‘ನೆಹರೂ ಭಜನೆ’ ಮಾಡುವುದರಲ್ಲಿ ನಿರತವಾಗಿವೆ ಎಂದು ಅವರು ಟೀಕಿಸಿದ್ದಾರೆ.

‘1942ರಲ್ಲಿ ವೈಜ್ಞಾನಿಕ ಮತ್ತು ಔದ್ಯಮಿಕ ಸಂಶೋಧನಾ ಮಂಡಳಿಯನ್ನು ಅರ್ಕಾಟ್‌ ರಾಮಸ್ವಾಮಿ ಮೊದಲಿಯಾರ್ ಮತ್ತು ಶಾಂತಿಸ್ವರೂಪ ಭಟ್ನಾಗರ್ ಅವರು ಸ್ಥಾಪಿಸಿದ್ದರು’ ಎಂದು ಹೇಳಿದರು.

‘ಇದರಲ್ಲಿ ನೆಹರೂ ಅವರ ಪಾತ್ರ ಏನಿತ್ತು? ಒಂದು ಸಭೆಯಲ್ಲಿ ಪಂಡಿತ್ ನೆಹರೂ ಅವರು, ‘ಮಂಡಳಿಯ ಕಾರ್ಯಚಟುವಟಿಕೆಗೆ ಹೆಚ್ಚಿನ ಸಮಯ ನೀಡಲು ನನಗೆ ಕಷ್ಟಸಾಧ್ಯವಾಗಲಿದೆ. ಸದ್ಯಕ್ಕೆ, ಮಂಡಳಿಯ ನಿತ್ಯದ ಚಟುವಟಿಕೆಗಳ ಮೇಲುಸ್ತುವಾರಿಯನ್ನು ಶ್ಯಾಮಪ್ರಸಾದ್ ಮುಖರ್ಜಿ ಅವರು ನೋಡಿಕೊಳ್ಳುವರು ಎಂದಿದ್ದರು’ ಎಂದು ತೇಜಸ್ವಿ ಸೂರ್ಯ ಉಲ್ಲೇಖಿಸಿದರು.

‘ಜನಸಂಘದ ಸ್ಥಾಪಕರೂ ಆದ ಶ್ಯಾಮಪ್ರಸಾದ್ ಮುಖರ್ಜಿ ನೇತೃತ್ವದಲ್ಲಿಯೇ ದೇಶದ ಮೊದಲ ವೈಜ್ಞಾನಿಕ ಸಂಸ್ಥೆಗೆ ಹೆಚ್ಚಿನ ಬಲ ಸಿಕ್ಕಿತ್ತು. ಈಗ ವೈಜ್ಞಾನಿಕ ಕ್ಷೇತ್ರದ ಸಾಧನೆಗೆ ನೆಹರೂ ಕೊಡುಗೆ ಕಾರಣ ಎಂದು ಬಿಂಬಿಸಲಾಗುತ್ತಿದೆ. ಆದರೆ, ವಾಸ್ತವ ಬೇರೆಯೇ ಇದೆ’ ಎಂದರು.

‘ಚಂದ್ರಯಾನ–1 ಯೋಜನೆಗೆ 2003ರಲ್ಲಿ ಮಾಜಿ ಪ್ರಧಾನಿ ಎ.ಬಿ.ವಾಜಪೇಯಿ ಅನುಮೋದನೆ ನೀಡಿದ್ದರು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ, ಇದನ್ನೂ ನೆಹರೂ ದೃಷ್ಟಿಕೋನದಿಂದ ನೋಡಿತು. ಇದರಲ್ಲಿ ಅವರ ಯಾವುದೇ ಪಾತ್ರ ಇರಲಿಲ್ಲ. ಚಂದ್ರಯಾನ–3 ಯಶಸ್ವಿಯಾದಾಗ ನಿರ್ದಿಷ್ಟ ಸ್ಥಳಕ್ಕೆ ತಿರಂಗಾ ಪಾಯಿಂಟ್ ಎಂದು ಮೋದಿ ಹೆಸರಿಸಿದರು. ನಿರ್ದಿಷ್ಟವಾಗಿ ಯಾರದೇ ಗುಣಗಾನ ಮಾಡಲಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT