ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠಾಣ್‌ಕೋಟ್ ದಾಳಿ ರೂವಾರಿ ಶಾಹಿದ್ ಲತೀಫ್ ಪಾಕಿಸ್ತಾನದ ಮಸೀದಿಯಲ್ಲಿ ಹತ್ಯೆ

Published 11 ಅಕ್ಟೋಬರ್ 2023, 13:05 IST
Last Updated 11 ಅಕ್ಟೋಬರ್ 2023, 13:05 IST
ಅಕ್ಷರ ಗಾತ್ರ

ನವದೆಹಲಿ: ಜೈಷ್ ಇ ಮೊಹಮ್ಮದ್‌ (ಜೆಇಎಂ) ಉಗ್ರ ಹಾಗೂ 2016ರ ಪಠಾಣ್‌ಕೋಟ್‌ ದಾಳಿಯ ಸೂತ್ರಧಾರಿ ಎನ್ನಲಾದ ಶಾಹಿದ್‌ ಲತೀಫ್‌ನನ್ನು ಪಾಕಿಸ್ತಾನದ ಸಿಯಾಲ್‌ಕೋಟ್‌ ಜಿಲ್ಲೆಯ ಮಸೀದಿಯೊಂದರಲ್ಲಿ ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಲತೀಫ್‌ ಅಲಿಯಾಸ್‌ ಬಿಲಾಲ್‌ನನ್ನು ಉಗ್ರರ ಪಟ್ಟಿಗೆ ಸೇರಿಸಲಾಗಿದೆ. ಲತೀಫ್‌ ಹಾಗೂ ಆತನ ಇಬ್ಬರು ಸಹಚರರನ್ನು ಸಿಯಾಲ್‌ಕೋಟ್‌ ಜಿಲ್ಲೆಯ ದಸ್ಕಾ ಪಟ್ಟಣದ ಮಸೀದಿಯಲ್ಲಿ ಮೂವರು ಅಪರಿಚಿತ ಬಂಧೂಕುದಾರಿಗಳು ಬುಧವಾರ ಹತ್ಯೆ ಮಾಡಿದ್ದಾರೆ.

1993ರಲ್ಲಿ ಕಾಶ್ಮೀರ ಕಣಿವೆಗೆ ನುಸುಳಿದ್ದ ಲತೀಫ್‌ನನ್ನು ಬಂಧಿಸಲಾಗಿತ್ತು. ಆತ ಜೆಇಎಂ ಸ್ಥಾಪಕ ಮಸೂದ್‌ ಅಜರ್‌ ಜೊತೆ 2010ರ ವರೆಗೂ ಜಮ್ಮುವಿನ ಜೈಲಿನಲ್ಲಿದ್ದ. ಬಿಡುಗಡೆ ಬಳಿಕ ಆತನನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಲಾಗಿತ್ತು. ಬಳಿಕ ಉಗ್ರ ಸಂಘಟನೆ ಸೇರಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

'ಇದು ಪಾಕಿಸ್ತಾನ ನೆಲದಲ್ಲಿ ಜೆಇಎಂಗೆ ಉಂಟಾದ ಅತಿದೊಡ್ಡ ಹಿನ್ನಡೆ' ಎಂದು ಅಧಿಕಾರಿ ಉಲ್ಲೇಖಿಸಿದ್ದಾರೆ.

2016ರ ಜನವರಿ 2ರಂದು ಪಠಾಣ್‌ಕೋಟ್‌ ವಾಯು ನೆಲೆಗೆ ನುಸುಳಿ, ದಾಳಿ ನಡೆಸಿದ್ದರು. ಈ ವೇಳೆ ಭಾರತೀಯ ವಾಯು ಪಡೆಯ 7 ಮಂದಿ ಹುತಾತ್ಮರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT