ತಿರುವನಂತಪುರ: ‘ದಿ ಕೇರಳ ಸ್ಟೋರಿ 2’ ದ್ವೇಷವನ್ನು ಹುಟ್ಟಿಸುವ ಚಿತ್ರವಾಗಿದ್ದು, ಇದರ ಬಿಡುಗಡೆ ಕುರಿತು ಸೂಕ್ಷ್ಮವಾಗಿ ಅವಲೋಕಿಸಬೇಕಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗುರುವಾರ ಹೇಳಿದ್ದಾರೆ.

‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು ‘ಚಿತ್ರದ ಮೊದಲ ಭಾಗ ಬಿಡುಗಡೆಯಾದಾಗ, ಇದು ಕೋಮುವಾದದ ಕಾರ್ಯಸೂಚಿಯನ್ನು ಹೊಂದಿದೆ ಹಾಗೂ ಸುಳ್ಳನ್ನು ಹರಡುತ್ತಿದೆ ಎಂಬುದು ಗೊತ್ತಾಗಿದೆ. ನಮ್ಮ ಜಾತ್ಯತೀತೆಯನ್ನು ಹಾಳು ಮಾಡಲು ಯೋಜಿಸಿರುವ ಈ ಚಿತ್ರವನ್ನು ಕೇರಳ ಮತ್ತೆ ತಿರಸ್ಕರಿಸುತ್ತದೆ’ ಎಂದು ಬರೆದುಕೊಂಡಿದ್ದಾರೆ.

ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವ ಉದ್ದೇಶ ಹೊಂದಿರುವ ಚಿತ್ರ ವೀಕ್ಷಣೆಗೆ ಉಚಿತ ಪಾಸ್ಗಳನ್ನು ನೀಡಲಾಗುತ್ತದೆ ಎಂಬುದು ಆಶ್ಚರ್ಯಕರವಾಗಿದೆ. ಸಾಮರಸ್ಯದಿಂದಿರುವ ನಮ್ಮ ಭೂಮಿಯನ್ನು ಭಯೋತ್ಪಾದನೆಯ ಕೇಂದ್ರ ಎಂಬಂತೆ ಬಿಂಬಿಸುವ ಇಂಥ ಪ್ರಯತ್ನಗಳ ವಿರುದ್ಧ ನಾವು ಒಟ್ಟಾಗಿ ನಿಲ್ಲಬೇಕಿದೆ. ಸತ್ಯಕ್ಕೆ ಯಾವಾಗಲೂ ಜಯ ಸಿಗುತ್ತದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.