ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರಿಸ್ ಕ್ರೀಡಾಕೂಟದಲ್ಲಿ ದಾಖಲೆಯ 29 ಪದಕಗಳನ್ನು ಗೆದ್ದ ಭಾರತದ ಪ್ಯಾರಾಲಿಂಪಿಯನ್‌ಗಳನ್ನು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ಭೇಟಿಯಾಗಿದ್ದಾರೆ.
ಕ್ರೀಡಾ ಸಚಿವಾಲಯ ಹಂಚಿಕೊಂಡ 43 ಸೆಕೆಂಡುಗಳ ವಿಡಿಯೊದಲ್ಲಿ, ಪದಕ ವಿಜೇತರನ್ನು ಪ್ರಧಾನಿ ಮೋದಿ ಅಭಿನಂದಿಸುವ ಹಾಗೂ ಅವರೊಂದಿಗೆ ಸಂವಾದ ನಡೆಸುವುದನ್ನು ಕಾಣಬಹುದು.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಪದಕ ವಿಜೇತರೊಂದಿಗೆ ಪ್ರಧಾನಿ ಸಂವಾದ
(ಪಿಟಿಐ ಚಿತ್ರ)
ಈ ಸಂದರ್ಭದಲ್ಲಿ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಭಾರತ ಪ್ಯಾರಾಲಿಂಪಿಕ್ಸ್ ಸಮಿತಿ (ಪಿಸಿಐ) ಮುಖ್ಯಸ್ಥ ದೇವೇಂದ್ರ ಜಜಾರಿಯಾ ಕೂಡ ಉಪಸ್ಥಿತರಿದ್ದರು.
ಮಹಿಳೆಯರ 10 ಮೀಟರ್ ಏರ್ ರೈಫಲ್ (SH1) ನಲ್ಲಿ ಸತತ ಎರಡನೇ ಪ್ಯಾರಾಲಿಂಪಿಕ್ ಚಿನ್ನ ಗೆದ್ದ ಶೂಟರ್ ಅವನಿ ಲೆಖರಾ ಮತ್ತು ಜೂಡೊ ಕ್ರೀಡೆಯಲ್ಲಿ ಪದಕ ಗೆದ್ದ ಕಪಿಲ್ ಪರ್ಮಾರ್ ಸೇರಿದಂತೆ ಇತರ ಅಥ್ಲೀಟ್‌ಗಳು ಪ್ರಧಾನಿ ಅವರನ್ನು ಭೇಟಿಯಾಗಿದ್ದಾರೆ.
ಅವನಿ ಲೆಖರಾ ಹಾಗೂ ಪ್ರಧಾನಿ ಮೋದಿ
(ಪಿಟಿಐ ಚಿತ್ರ)
ಇತ್ತೀಚಿನ ಪ್ಯಾರಿಸ್ ಕ್ರೀಡೆಗಳಲ್ಲಿ ಭಾರತ 7 ಚಿನ್ನ, 9 ಬೆಳ್ಳಿ ಮತ್ತು 13 ಕಂಚು ಸೇರಿ ಒಟ್ಟು 29 ಪದಕಗಳನ್ನು ಗೆದ್ದುಕೊಂಡಿತ್ತು.
ಕಪಿಲ್ ಪರ್ಮಾರ್ ಹಾಗೂ ಪ್ರಧಾನಿ ಮೋದಿ
(ಪಿಟಿಐ ಚಿತ್ರ)
ಪ್ಯಾರಾಲಿಂಪಿಕ್ಸ್ ಕ್ರೀಡೆಗಳಲ್ಲಿ ಚಿನ್ನ ಗೆದ್ದ ಭಾರತದ ಕ್ರೀಡಾಪಟುಗಳಿಗೆ ₹75 ಲಕ್ಷ, ಬೆಳ್ಳಿ ಗೆದ್ದವರಿಗೆ ₹50 ಲಕ್ಷ ಹಾಗೂ ಕಂಚಿನ ಪದಕ ಗೆದ್ದವರಿಗೆ ₹30 ಲಕ್ಷ ನಗದು ಬಹುಮಾನವನ್ನು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಮಂಗಳವಾರ ಪ್ರದಾನ ಮಾಡಿದರು.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಪದಕ ವಿಜೇತರೊಂದಿಗೆ ಪ್ರಧಾನಿ ಸಂವಾದ
(ಪಿಟಿಐ ಚಿತ್ರ)
ಮಿಶ್ರ ತಂಡ ವಿಭಾಗದಲ್ಲಿ ಪದಕ ಗೆದ್ದ ಕ್ರೀಡಾಪಟುಗಳು ₹22.5 ಲಕ್ಷ ಬಹುಮಾನ ಪಡೆದರು. ತೋಳುಗಳಿಲ್ಲದೇ ಕಾಲಿನಿಂದ ಬಾಣ ಪ್ರಯೋಗಿಸುವ ಆರ್ಚರಿ ಪಟು ಶೀತಲ್ ದೇವಿ, ರಾಕೇಶ್ ಕುಮಾರ್ ಇವರಲ್ಲಿ ಒಳಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.