ದುಬೈನಲ್ಲಿ ಕನ್ನಡಾಭಿಮಾನ: ಮೆಚ್ಚುಗೆ
ದುಬೈನಲ್ಲಿ ಕನ್ನಡ ಭಾಷಾ ಬೆಳವಣಿಗೆಯ ಕುರಿತಂತೆ ಪ್ರಧಾನಿ ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ‘ದುಬೈನಲ್ಲಿ ನೆಲಸಿರುವ ಕನ್ನಡದ ಕುಟುಂಬಗಳು ತಮಗೆ ಒಂದು ಪ್ರಶ್ನೆ ಕೇಳಿಕೊಂಡರು. ನಮ್ಮ ಮಕ್ಕಳು ತಂತ್ರಜ್ಞಾನ ಲೋಕದಲ್ಲಿ ಬಹಳಷ್ಟು ಮುಂದುವರಿದಿದ್ದಾರೆ. ಆದರೆ ಭಾಷೆಯಿಂದ ದೂರ ಸರಿಯುತ್ತಿದ್ದಾರೆ ಎಂಬುದು ಅವರನ್ನು ಕಾಡತೊಡಗಿತ್ತು. ಇದಕ್ಕೆ ಉತ್ತರವಾಗಿ ‘ಕನ್ನಡ ಪಾಠಶಾಲೆಯೂ ಆರಂಭಗೊಂಡಿತು. ಇದರ ಅಡಿಯಲ್ಲಿ ಮಕ್ಕಳಿಗೆ ಕನ್ನಡವನ್ನು ಕಲಿಸಿ ಬರೆಯುವ ಜೊತೆಗೆ ಮಾತನಾಡುವುದನ್ನು ಕಲಿಸಿಕೊಡಲಾಯಿತು. ಇದರಿಂದ ಸಾವಿರಾರು ವಿದ್ಯಾರ್ಥಿಗಳು ಇದರಡಿಯಲ್ಲಿ ಸೇರಿಕೊಂಡಿದ್ದಾರೆ. ನಿಜವಾಗಿಯೂ ಕನ್ನಡ ನಾಡು ನುಡಿಯೂ ಹೆಮ್ಮೆಯಾಗಿದೆ’ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.