ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ಭೇಟಿಯಾದ ಪ್ರಣಬ್‌ ಮುಖರ್ಜಿ ಪುತ್ರಿ

Published 15 ಜನವರಿ 2024, 15:27 IST
Last Updated 15 ಜನವರಿ 2024, 15:27 IST
ಅಕ್ಷರ ಗಾತ್ರ

ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ  ಪ್ರಣಬ್‌ ಮುಖರ್ಜಿ ಅವರ ಕುರಿತು ಬರೆದ ಪುಸ್ತಕವನ್ನು ನೀಡಿದ್ದಾರೆ. 

ಶರ್ಮಿಷ್ಠಾ ಅವರು ತಂದೆ ಪ್ರಣಬ್‌ ಅವರ ಕುರಿತು ಬರೆದ Pranab My Father: A Daughter Remembers ಪುಸ್ತಕ ಕಳೆದ ತಿಂಗಳು ಪ್ರಣಬ್‌  ಅವರ ಜನ್ಮದಿನೋತ್ಸವದಂದು ಬಿಡುಗಡೆಯಾಗಿತ್ತು.

ಶರ್ಮಿಷ್ಠಾ ಭೇಟಿ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಶರ್ಮಿಷ್ಠಾ ಅವರನ್ನು ಭೇಟಿಯಾಗಲು ಮತ್ತು ಪ್ರಣಬ್ ಅವರೊಂದಿಗೆ ಕಳೆದ ಕ್ಷಣಗಳ ಬಗ್ಗೆ ನೆನಪಿಸಿಕೊಳ್ಳಲು ಯಾವಾಗಲೂ ಸಂತೋಷ. ಅವರ ಶ್ರೇಷ್ಠತೆ, ಬುದ್ಧಿವಂತಿಕೆ ಮತ್ತು ಬೌದ್ಧಿಕ ಆಳವು ನಿಮ್ಮ ಪುಸ್ತಕದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ! ಎಂದು ಪ್ರಧಾನಿ ಮೋದಿ ಪೋಸ್ಟ್‌ನಲ್ಲಿ ಶರ್ಮಿಷ್ಠಾ ಅವರಿಗೆ ತಿಳಿಸಿದ್ದಾರೆ.

2014ರಲ್ಲಿ ಶರ್ಮಿಷ್ಠಾ ಮುಖರ್ಜಿ ಅವರು ಕಾಂಗ್ರೆಸ್‌ಗೆ ಸೇರಿದ್ದರು. 2015ರಲ್ಲಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಗ್ರೇಟರ್‌ ಕೈಲಾಶ್‌ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. 2021ರ ಸೆಪ್ಟೆಂಬರ್‌ನಲ್ಲಿ ರಾಜಕೀಯದಿಂದ ಹೊರಗುಳಿಯುವುದಾಗಿ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT