ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯಾಕಾಶ ತಂತ್ರಜ್ಞಾನ: ಖಾಸಗಿ ಕಂಪನಿಗಳ ನೆರವು- ಎಸ್‌. ಸೋಮನಾಥ್

Published 28 ಏಪ್ರಿಲ್ 2024, 19:30 IST
Last Updated 28 ಏಪ್ರಿಲ್ 2024, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಾಹ್ಯಾಕಾಶ ತಂತ್ರಜ್ಞಾನ ಸಂಶೋಧನೆಯ ವೇಗ ತೀವ್ರಗೊಳ್ಳಲು ಖಾಸಗಿ ಕ್ಷೇತ್ರದವರು ನೆರವು ನೀಡಲಿದ್ದಾರೆ ಎಂದು ಇಸ್ರೋ ಅಧ್ಯಕ್ಷ ಎಸ್‌. ಸೋಮನಾಥ್ ಅಧಿಕೃತ ಇನ್‌ಸ್ಟಾಗ್ರಾಂ ಸಂವಾದದಲ್ಲಿ ತಿಳಿಸಿದ್ದಾರೆ. 

ಬಹುತೇಕ ದೇಶಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಕ್ಕೆ ‘ಸ್ಪೇಸ್‌ಎಕ್ಸ್‌’ ಎಂಬ ಖಾಸಗಿ ಸಂಸ್ಥೆಯು ಹೆಚ್ಚು ಕೊಡುಗೆ ನೀಡಿದೆ ಎಂದು ಸಂವಾದದಲ್ಲಿ ಶನಿವಾರ ಆಸಕ್ತರೊಬ್ಬರು ಉಲ್ಲೇಖಿಸಿದಾಗ, ಸೋಮನಾಥ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ. 

ರಾಕೆಟ್‌ ಎಂಜಿನ್‌ಗಳ ತಯಾರಿಕೆಯಲ್ಲಿ ‘ಸ್ಪೇಸ್‌ಎಕ್ಸ್‌’ ಕಂಪನಿಯನ್ನು ಅಮೆರಿಕ ವ್ಯಾಪಕವಾಗಿ ತೊಡಗಿಸಿಕೊಂಡಿದೆ. ಆ ನಡೆಯನ್ನು ಭಾರತವೂ ಮಾನವ ಚಾಲಿತ ವೈಮಾನಿಕ ವಾಹನಗಳ ತಯಾರಿಕೆಯಲ್ಲಿ ಅನುಸರಿಸಲು ಸಾಧ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT