ದುಬೈ (ಪಿಟಿಐ): ಚೆಸ್ ಆಟಗಾರ ಪಿ. ಶ್ಯಾಮನಿಖಿಲ್ ಅವರು ಭಾರತದ 85ನೇ ಗ್ರ್ಯಾಂಡ್‌ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ. 12 ವರ್ಷಗಳಿಂದ ಅವರು ಪಟ್ಟ ಶ್ರಮಕ್ಕೆ ಈಗ ಫಲ ದೊರೆತಿದೆ.

ದುಬೈ ಪೊಲೀಸ್ ಮಾಸ್ಟರ್ಸ್ ಚೆಸ್ ಟೂರ್ನಿಯಲ್ಲಿ ಸ್ಪರ್ಧಿಸಿದ್ದ ಅವರು ಮೂರನೇ ಮತ್ತು ಅಂತಿಮ ಜಿಎಂ ನಾರ್ಮ್ ಪೂರೈಸಿದರು.

ತಮ್ಮ ದೀರ್ಘ ಕಾಲದ ಕನಸು ಈಡೇರಿಸಿಕೊಳ್ಳಲು ಅವರಿಗೆ ಒಂದು ಜಯ ಹಾಗೂ ಎಂಟು ಡ್ರಾಗಳ ಅಗತ್ಯವಿತ್ತು. ಅದು ಈ ಟೂರ್ನಿಯಲ್ಲಿ ಈಡೇರಿತು. 31 ವರ್ಷದ ಶ್ಯಾಮನಿಖಿಲ್ ಅವರು ಗ್ರ್ಯಾಂಡ್‌ಮಾಸ್ಟರ್ ಗೌರವ ಪಡೆಯಲು ಬೇಕಾದ 2500 ಇಎಲ್‌ಒ ಪಾಯಿಂಟ್ಸ್ ಸಂಪಾದಿಸಿದ್ದಾರೆ.

ಅವರು 2012ರಲ್ಲಿಯೇ ಎರಡು ಜಿಎಂ ನಾರ್ಮ್‌ಗಳನ್ನು ಪೂರೈಸಿದ್ದರು. ಆದರೆ ಅಂತಿಮ ನಾರ್ಮ್ ಗಳಿಸಲು ಇಲ್ಲಿಯವರೆಗೆ ಕಾಯಬೇಕಾಯಿತು.

ತಮಿಳನಾಡಿನ ನಾಗರ್‌ಕೊಯಿಲ್‌ನ ಅವರು ಎಂಟನೇ ವಯಸ್ಸಿನಿಂದಲೇ ಚೆಸ್ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದಾರೆ.

‘ನನ್ನ ಎಂಟನೇ ವಯಸ್ಸಿನಲ್ಲಿಯೇ ಚೆಸ್ ಆಡಲಾರಂಭಿಸಿದೆ. ನನ್ನ ಪಾಲಕರು ಆಟ ಕಲಿಸಿದರು. ಆದರೆ, ಮೂರು ವರ್ಷಗಳ ಕಾಲ ಯಾವುದೇ ಟೂರ್ನಿಯಲ್ಲಿ ಆಡಲು ಸಾಧ್ಯವಾಗಲಿಲ್ಲ. 13 ವರ್ಷದೊಳಗಿನವರ ರಾಜ್ಯ ಚಾಂಪಿಯನ್‌ಷಿಪ್ ಜಯಿಸುವುದರೊಂದಿಗೆ ಅವಕಾಶಗಳ ಬಾಗಿಲು ತೆರೆಯಿತು’ ಎಂದು ಶ್ಯಾಮನಿಖಿಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.