ನವದೆಹಲಿ: ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ದೀರ್ಘಕಾಲದ ಬರಗಾಲ ಪರೋಕ್ಷವಾಗಿ ಸಾಮಾಜಿಕ ದುರ್ಬಲತೆಗಳನ್ನು ಇನ್ನಷ್ಟು ಹದಗೆಡಿಸುತ್ತದೆ. ಹದಿಹರೆಯದ ಹುಡುಗಿಯರು ಮತ್ತು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಅಧ್ಯಯನವೊಂದು ಹೇಳಿದೆ.

ಆಸ್ಟ್ರೇಲಿಯಾದ ಕರ್ಟಿನ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ, ಹವಾಮಾನ ಬದಲಾವಣೆಯು ನೀರಿಗಾಗಿ ದೂರ ಪ್ರಯಾಣ ಮಾಡಬೇಕಾದ ಮಹಿಳೆಯರ ಮೇಲೆ ಹೇಗೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ದುಡಿಮೆಗಾಗಿ ಬಲವಂತವಾಗಿ ವಲಸೆ ಹೋಗುವಂತೆ ಮಾಡುತ್ತದೆ ಹಾಗೂ ಬೇಗನೆ ಮದುವೆಯಾಗಲು ಪ್ರೋತ್ಸಾಹಿಸುತ್ತದೆ ಎಂಬುದನ್ನು ಒತ್ತಿ ಹೇಳಲಾಗಿದೆ.

ಪಿಎಲ್ಇಎಸ್ ಗ್ಲೋಬಲ್ ಪಬ್ಲಿಕ್ ಹೆಲ್ತ್ ಜರ್ನಲ್ನಲ್ಲಿ ಪ್ರಕಟವಾಗಿರುವ ಅಧ್ಯಯನದ ವರದಿಯಲ್ಲಿ, ದಕ್ಷಿಣ ಅಮೆರಿಕ, ಆಫ್ರಿಕಾ ಮತ್ತು ಆಗ್ನೇಯ ಏಷ್ಯಾದ 14 ದೇಶಗಳಿಂದ 13-24 ವರ್ಷ ವಯಸ್ಸಿನ 35,000ಕ್ಕೂ ಹೆಚ್ಚು ಮಹಿಳೆಯರ ಸಮೀಕ್ಷೆಯ ಪ್ರತಿಕ್ರಿಯೆಗಳನ್ನು ವಿಶ್ಲೇಷಿಸಲಾಗಿದೆ.

8 ರಿಂದ 48 ತಿಂಗಳ ದೀರ್ಘ, ತೀವ್ರ ಬರಗಾಲದ ಸಮಯದಲ್ಲಿ ಲೈಂಗಿಕ ದೌರ್ಜನ್ಯದ ಸಾಧ್ಯತೆ ಹೆಚ್ಚಾಗಿದೆ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ. ತುಂಬಾ ಶುಷ್ಕ ವಾತಾವರಣದ ಅವಧಿಗಳಲ್ಲಿ ಲೈಂಗಿಕ ದೌರ್ಜನ್ಯ ಸಾಧ್ಯತೆ ಹೆಚ್ಚಾಗುತ್ತದೆ ಎಂದು ಅದು ಹೇಳಿದೆ.

ಈ ಹಿಂದೆ ಆಗಿರುವ ಕೆಲವು ಅಧ್ಯಯನದಲ್ಲಿ, ಹವಾಮಾನ ವೈಪರೀತ್ಯ ಮತ್ತು ಕೌಟುಂಬಿಕ ಹಿಂಸಾಚಾರದ ಹೆಚ್ಚಳದ ನಡುವಿನ ಸಂಬಂಧವನ್ನು ಸೂಚಿಸಿವೆ.

ಇದೇ ಜರ್ನಲ್ನಲ್ಲಿ 2024ರ ಅಕ್ಟೋಬರ್ ತಿಂಗಳಲ್ಲಿ ಪ್ರಕಟವಾದ ಅಧ್ಯಯನದಲ್ಲಿ 156 ದೇಶಗಳ ರಾಷ್ಟ್ರೀಯ ಮಟ್ಟದ ದತ್ತಾಂಶವನ್ನು ವಿಶ್ಲೇಷಿಸಲಾಗಿತ್ತು. ಬಿರುಗಾಳಿ, ಭೂಕುಸಿತ ಮತ್ತು ಪ್ರವಾಹಗಳಂತಹ ತೀವ್ರ ಹವಾಮಾನ ವೈಪರೀತ್ಯದ ನಂತರದ ಎರಡು ವರ್ಷಗಳಲ್ಲಿ ಕೌಟುಂಬಿಕ ಹಿಂಸಾಚಾರ ಹೆಚ್ಚಳವನ್ನು ಪತ್ತೆ ಮಾಡಲಾಗಿತ್ತು

ಮಹಿಳೆಯರು ಮತ್ತು ಹದಿಹರೆಯದವರ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ನಿರ್ದಿಷ್ಟವಾಗಿ ಜನಸಂಖ್ಯಾ ಮಟ್ಟದ ವಿಶ್ಲೇಷಣೆಯನ್ನು ಒದಗಿಸಿದ ಮೊದಲ ಅಧ್ಯಯನ ಇದು ಎಂದು ಸಂಶೋಧಕರು ಹೇಳಿದ್ದಾರೆ.

ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿನ ಗ್ರಾಮೀಣ ಸಮುದಾಯಗಳು ವಿಶೇಷವಾಗಿ ಪರಿಸರ-ಸಂಬಂಧಿತ ಒತ್ತಡಕ್ಕೆ ಗುರಿಯಾಗುತ್ತವೆ. ಏಕೆಂದರೆ, ಬರ ಜೀವನೋಪಾಯ ಮತ್ತು ಸಂಪನ್ಮೂಲಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ಅವರು ಹೇಳಿದ್ದಾರೆ.

ಬರದ ಸಮಯದಲ್ಲಿ ಬಡ ದೇಶಗಳ ಗ್ರಾಮೀಣ ಮಹಿಳೆಯರು ದೂರದ ನೀರಿನ ಮೂಲಗಳನ್ನು ಅವಲಂಬಿಸಬೇಕಾಗಿರುವುದರಿಂದ, ವಲಸೆಯ ಅಗತ್ಯವಿರುತ್ತದೆ. ಇದು ಲೈಂಗಿಕ ಹಿಂಸಾಚಾರದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರ ತಂಡ ಹೇಳಿದೆ. ಅಲ್ಲದೆ, ಚಿಕ್ಕ ವಯಸ್ಸಿಗೆ ಬಲವಂತದ ಮದುವೆಗೂ ಪ್ರೋತ್ಸಾಹಿಸುತ್ತದೆ. ಇಲ್ಲೂ ಲೈಂಗಿಕ ಹಿಂಸಾಚಾರ ನಡೆಯುತ್ತದೆ ಎಂದು ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.