ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀ ಸುರಕ್ಷಾ ನಗರ: ಯೋಜನೆ ಶೀಘ್ರ ಜಾರಿ

Last Updated 9 ಸೆಪ್ಟೆಂಬರ್ 2018, 17:03 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರು ಸೇರಿ ಪ್ರಮುಖ ಎಂಟು ನಗರಗಳಲ್ಲಿ ಅಪಾಯದ ಕರೆಗಂಟೆ ಮತ್ತು ಸಂಪೂರ್ಣ ಮಹಿಳಾ ಗಸ್ತು ತಂಡಗಳ ರಚನೆಗೆ ಶೀಘ್ರವೇ ಚಾಲನೆ ದೊರೆಯಲಿದೆ. ನಗರಗಳಲ್ಲಿ ಮಹಿಳಾ ಸುರಕ್ಷತೆಯ ವಿಶೇಷ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವಾಲಯವು ₹3,000 ಕೋಟಿ ಅನುದಾನ ಬಿಡುಗಡೆಗೆ ಅನುಮೋದನೆ ನೀಡಿದೆ.

ಮಹಿಳಾ ಸುರಕ್ಷತೆಗಾಗಿ ಸಾಧ್ಯವಿರುವ ಎಲ್ಲ ರೀತಿಯ ಕಾರ್ಯಕ್ರಮಗಳನ್ನು ಜಾರಿಗೆ ತರುವುದು ಯೋಜನೆಯ ಉದ್ದೇಶ. ಅತಿ ಹೆಚ್ಚು ಅಪರಾಧ ಕೃತ್ಯಗಳು ನಡೆಯುವ ಪ್ರದೇಶಗಳಲ್ಲಿ ಸುರಕ್ಷಾ ವಲಯಗಳ ಸ್ಥಾಪನೆ, ಅತ್ಯಾಧುನಿಕ ನಿಯಂತ್ರಣ ಕೇಂದ್ರಗಳ ಜತೆ ಸಂಪರ್ಕ ಹೊಂದಿರುವ ಸಿ.ಸಿ.ಟಿ.ವಿ. ಕ್ಯಾಮೆರಾಗಳ ಅಳವಡಿಕೆ, ಭದ್ರತಾ ವ್ಯವಸ್ಥೆ ಇರುವ ಸಾರ್ವಜನಿಕ ಸಾರಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಅಪಾಯ ಕರೆಗಂಟೆಗಳ ಅವಳಡಿಕೆ ಯೋಜನೆಯ ಭಾಗಗಳಾಗಿವೆ.

ಪೊಲೀಸ್‌ ಠಾಣೆಗಳಲ್ಲಿ ಮಹಿಳಾ ಸಹಾಯ ಕೇಂದ್ರಗಳು ಆರಂಭಗೊಳ್ಳಲಿವೆ. ಅಲ್ಲಿ ಆಪ್ತಸಮಾಲೋಚಕರ ಸೇವೆಯೂ ದೊರಕಲಿದೆ. ಹೀಗಾಗಿ ಮಹಿಳೆಯರು ದೂರು ದಾಖಲಿಸುವುದು ಸುಲಭವಾಗಲಿದೆ ಮತ್ತು ಸಂಕಷ್ಟದ ಸಂದರ್ಭಗಳಲ್ಲಿ ಅವರಿಗೆ ವಿಶೇಷ ನೆರವು ದೊರೆಯಲಿದೆ.

ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ನಗರಾಭಿವೃದ್ಧಿ ಸಚಿವಾಲಯ ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಹಾಗೂ ಆಯಾ ನಗರಗಳ ಮಹಾನಗರಪಾಲಿಕೆ ಮತ್ತು ಪೊಲೀಸ್‌ ಆಯುಕ್ತರ ಸಹಭಾಗಿತ್ವದಲ್ಲಿ ಯೋಜನೆ ಜಾರಿಯಾಗಲಿದೆ. ಯೋಜನೆ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40 ಅನುಪಾತದಲ್ಲಿ ಭರಿಸಲಿವೆ.

ಯೋಜನೆಯು 2018–19 ರಿಂದ 2020–21ರ ಅವಧಿಯಲ್ಲಿ ಅನುಷ್ಠಾನಗೊಳ್ಳಲಿದೆ. 2013ರಲ್ಲಿ ಸ್ಥಾಪಿಸಲಾದ ನಿರ್ಭಯಾ ನಿಧಿಯ ಅಡಿಯಲ್ಲಿ ಯೋಜನೆಯನ್ನು ಮಂಜೂರು ಮಾಡಲಾಗಿದೆ.

ಮಹಿಳಾ ಸುರಕ್ಷಾ ನಗರ ಯೋಜನೆ

* ಮಹಿಳೆಯರು ಮತ್ತು ಮಕ್ಕಳಿಗೆ ವಿಶ್ರಾಂತಿ ತಾಣಗಳು

* ಸ್ಮಾರ್ಟ್‌ ಎಲ್‌ಇಡಿ ಬೀದಿ ದೀಪಗಳು

* ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಬಿಕ್ಕಟ್ಟು ನಿರ್ವಹಣಾ ಕೇಂದ್ರಗಳು

* ವಿಧಿವಿಜ್ಞಾನ ಮತ್ತು ಸೈಬರ್‌ ಅಪರಾಧ ಘಟಕಗಳು

ಯಾವ ನಗರಕ್ಕೆ ಎಷ್ಟು ಮೊತ್ತ

* ದೆಹಲಿ– ₹663.67 ಕೋಟಿ

* ಬೆಂಗಳೂರು– ₹667 ಕೋಟಿ

* ಮುಂಬೈ– ₹252 ಕೋಟಿ

* ಕೋಲ್ಕತ್ತ–₹181.32 ಕೋಟಿ

* ಚೆನ್ನೈ– ₹425.06 ಕೋಟಿ

* ಹೈದರಾಬಾದ್‌– ₹282.50 ಕೋಟಿ

* ಅಹಮದಾಬಾದ್‌– ₹253 ಕೋಟಿ

* ಲಖನೌ– ₹195 ಕೋಟಿ

ಒಟ್ಟು ಮೊತ್ತ: ₹2919.55 ಕೋಟಿ

ಮಹಿಳೆಯರ ವಿರುದ್ಧದ ಅಪರಾಧ ಹೆಚ್ಚಳ

3,29,243 (2015)

3,38,954 (2016)

ಅತ್ಯಾಚಾರ

34,651 (2015)

38,947 (2016)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT