ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಬಾಂಡ್ ಅಕ್ರಮ ಮರೆಮಾಚಲು ಕೇಜ್ರಿವಾಲ್ ಬಂಧನ: ಅಖಿಲೇಶ್

Published 22 ಮಾರ್ಚ್ 2024, 10:19 IST
Last Updated 22 ಮಾರ್ಚ್ 2024, 10:19 IST
ಅಕ್ಷರ ಗಾತ್ರ

ಸೀತಾಪುರ(ಉತ್ತರ ಪ್ರದೇಶ): ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

‘ಅವರು(ಬಿಜೆಪಿ) ನಾಯಕರನ್ನು ಜೈಲಿನಲ್ಲಿಡಬಹುದು, ಜನರನ್ನಲ್ಲ. ಜನ ಅವರಿಗೆ ಪಾಠ ಕಲಿಸಲಿದ್ದಾರೆ’ ಎಂದು ಗುಡುಗಿದ್ದಾರೆ.

‘ಮುಖ್ಯಮಂತ್ರಿಗಳನ್ನು ಜೈಲಿಗೆ ಕಳುಹಿಸುವುದರಿಂದ ಮತ್ತು ಸತ್ಯ ಹೇಳುವವರನ್ನು ನಿಗ್ರಹಿಸುವುದರಿಂದ ಪ್ರಜಾಪ್ರಭುತ್ವ ದುರ್ಬಲಗೊಳಿಸುವ ಅವರ ಪ್ರಯತ್ನಕ್ಕೆ ಫಲ ಸಿಗುವುದಿಲ್ಲ. ಸಮಯ ಬದಲಾಗುತ್ತದೆ. ಅವರಿಗೆ ಜನ ಉತ್ತರ ಕೊಡಲಿದ್ದಾರೆ’ ಎಂದು ಅಖಿಲೇಶ್ ಹೇಳಿದ್ದಾರೆ.

ಸುಳ್ಳು ಪ್ರಕರಣಗಳನ್ನು ದಾಖಲಿಸಿದ ಬ್ರಹ್ಮಾಂಡ ದಾಖಲೆಯೇ ಬಿಜೆಪಿ ಹೆಸರಲ್ಲಿದೆ ಎಂದು ಅವರು ದೂರಿದ್ದಾರೆ.

ಉತ್ತರಪ್ರದೇಶದಲ್ಲಷ್ಟೇ ಅಲ್ಲ, ದೇಶದ ಯಾವುದೇ ಕಡೆಯಲ್ಲೂ ಸುಳ್ಳು ಪ್ರಕರಣಗಳನ್ನು ಬಿಜೆಪಿ ದಾಖಲಿಸುತ್ತಿದೆ. ಚುನಾವಣಾ ಬಾಂಡ್ ಅಕ್ರಮ ಬಯಲಾದ ಕೂಡಲೇ ಅದನ್ನು ಮರೆಮಾಚಲು ದೆಹಲಿಯಲ್ಲಿ ಏನು ನಡೆಯುತ್ತಿದೆ ನೋಡಿ. ಸುಳ್ಳು ಪ್ರಕರಣಗಳ ಮೂಲಕ ನಾಯಕರನ್ನು ಜೈಲಿಗೆ ಹಾಕುವುದು ಮತ್ತು ಅವರ ಹಕ್ಕುಗಳನ್ನು ಕಸಿದುಕೊಳ್ಳುವುದನ್ನು ದೇಶ ಒಪ್ಪುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ಸಮಯ ಅತ್ಯಂತ ಶಕ್ತಿಶಾಲಿಯಾದದ್ದು. ಯಾರೊಬ್ಬರೂ ಸಮಯಕ್ಕಿಂತ ಬಲಿಷ್ಠರಿಲ್ಲ. ಸಮಯ ಬಂದಾಗ ಜನ ಬಿಜೆಪಿಗೆ ಪಾಠ ಕಲಿಸುತ್ತಾರೆ. ಜನ ಇದಕ್ಕಾಗಿ ಮತ ಹಾಕಲು ಕಾಯುತ್ತಿದ್ದಾರೆ ಎಂದು ಅಖಿಲೇಶ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT