ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ನಲ್ಲಿ ಅಣ್ವಸ್ತ್ರ ಬಳಕೆ ಬಗ್ಗೆ ರಷ್ಯಾ ಬೆದರಿಕೆ: ಕ್ವಾಡ್ ದೇಶಗಳ ಖಂಡನೆ

Last Updated 3 ಮಾರ್ಚ್ 2023, 10:41 IST
ಅಕ್ಷರ ಗಾತ್ರ

ನವದೆಹಲಿ: ಉಕ್ರೇನ್‌ನಲ್ಲಿ ಅಣ್ವಸ್ತ್ರ ಬಳಸುವುದಾಗಿ ಬೆದರಿಕೆ ಒಡ್ಡುತ್ತಿರುವ ರಷ್ಯಾ ನಡೆಯನ್ನು ಕ್ವಾಡ್‌ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರು ಖಂಡಿಸಿದ್ದಾರೆ.

ರಷ್ಯಾ ನಡೆಯು ಸ್ವೀಕಾರಾರ್ಹವಲ್ಲ ಎಂದು ಸಭೆ ಬಳಿಕ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ದಕ್ಷಿಣ ಚೀನಾ ಸಮುದ್ರದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುವ ಯಾವುದೇ ಏಕಪಕ್ಷೀಯ ಕ್ರಮಗಳನ್ನು ತಾವು ವಿರೋಧಿಸುತ್ತೇವೆ ಎಂದು ಸಚಿವರು ಹೇಳಿದರು. ಅಲ್ಲದೆ, ವಿವಾದಿತ ಪ್ರದೇಶಗಳಲ್ಲಿ ಮಿಲಿಟರಿ ಜಮಾವಣೆ ಮಾಡುತ್ತಿರುವ ಚೀನಾ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಕ್ವಾಡ್ ಭಾರತ, ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕ ದೇಶಗಳ ಒಕ್ಕೂಟವಾಗಿದೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರು ಸಭೆಯ ನೇತೃತ್ವ ವಹಿಸಿದ್ದರು. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್‌, ಜಪಾನ್‌ನ ವಿದೇಶಾಂಗ ಸಚಿವ ಯೋಶಿಮಸಾ ಹಯಾಶಿ ಹಾಗೂ ಆಸ್ಟ್ರೇಲಿಯಾದ ಪೆನಿ ವೊಂಗ್‌ ಕ್ವಾಡ್ ಸದಸ್ಯ ರಾಷ್ಟ್ರಗಳ ಸಭೆಯಲ್ಲಿ ಭಾಗವಹಿಸಿದ್ದರು.

2022ರ ಸೆಪ್ಟೆಂಬರ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ಸಭೆ ನಡೆದಿತ್ತು. ಆಗ ಚರ್ಚಿಸಲಾಗಿದ್ದ ವಿಷಯಗಳ ಜೊತೆಗೆ ಇಂಡೊ–ಪೆಸಿಫಿಕ್‌ ವಲಯದಲ್ಲಿ ಇತ್ತೀಚೆಗೆ ನಡೆದಿರುವ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಲಾಗಿದೆ.

ಚೇತರಿಸಿಕೊಳ್ಳುವ ಪೂರೈಕೆ ಸರಪಳಿ, ಡಿಜಿಟಲ್ ಸವಾಲುಗಳ ಕುರಿತಂತೆ ಕ್ವಾಡ್ ಸಭೆಯಲ್ಲಿ ಜೈಶಂಕರ್ ವಿವರಿಸಿದರು.

ಕ್ವಾಡ್ ಸಮೂಹ ಮತ್ತು ಪ್ರಪಂಚವು ಮೂರು ದೊಡ್ಡ ಸಮಸ್ಯೆಗಳನ್ನು ಪರಿಹರಿಸಬೇಕಿದೆ. ಅವುಗಳೆಂದರೆ, ಹೆಚ್ಚು ವಿಶ್ವಾಸಾರ್ಹ ಮತ್ತು ಸ್ಥಿತಿಸ್ಥಾಪಕ ಪೂರೈಕೆ ಸರಪಳಿ, ನಂಬಿಕೆ ಮತ್ತು ಪಾರದರ್ಶಕತೆಯ ಡಿಜಿಟಲ್ ಸವಾಲು ಹಾಗೂ ಸಂಪರ್ಕ ಎಂದು ಅವರು ಹೇಳಿದರು.

‘ನಾವು ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಉಪಕ್ರಮಕ್ಕಾಗಿ ಭಯೋತ್ಪಾದನಾ ನಿಗ್ರಹ ಗುಂಪು ಹಾಗೂ ಸಾಮಾನ್ಯ ಕಾರ್ಯಾಚರಣಾ ವಿಧಾನಗಳನ್ನು(ಎಸ್ಒಪಿ) ಒಪ್ಪಿಕೊಂಡಿದ್ದೇವೆ. ಎಲ್ಲಾ ನಾಲ್ಕು ರಾಷ್ಟ್ರಗಳು ವಿಶ್ವಸಂಸ್ಥೆಯ ಸುಧಾರಣಾ ಕ್ರಮಗಳನ್ನು ಬೆಂಬಲಿಸಿವೆ’ ಎಂದು ಜೈಶಂಕರ್ ಹೇಳಿದರು.

ಕ್ಯಾಡ್ ಉಗ್ರಗಾಮಿ ಸಂಘಟನೆ ಅಲ್ಲ. ಪ್ರಾಕೃತಿಕ ವಿಕೋಪಗಳ ಸಂದರ್ಭ ಮಾನವೀಯ ನೆರವು ನೀಡಲು ಮಾಡಿಕೊಂಡಿರುವ ಒಕ್ಕೂಟ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT