ಭುವನೇಶ್ವರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕರಂತೆ ವರ್ತಿಸದೆ, ಬೌನ್ಸರ್ ರೀತಿ ವರ್ತಿಸಿದ್ದಾರೆ ಎಂದು ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಆರೋಪಿಸಿದ್ದಾರೆ.

ಸಂಸತ್ ಆವರಣದಲ್ಲಿ ನಡೆದ ಪ್ರತಿಭಟನೆ ವೇಳೆ ಗಾಯಗೊಂಡಿದ್ದ ಪ್ರತಾಪ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇತ್ತೀಚೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಅವರು ಪ್ರತಿಕ್ರಿಯಿಸಿದ್ದಾರೆ.

‘ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಯುತ್ತಿರುವ ವೇಳೆ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ನಾಯಕರೊಂದಿಗೆ ಬಂದಿದ್ದರು. ಏಕಾಏಕಿ ಬಿಜೆಪಿ ಸಂಸದ ಮುಖೇಶ್ ರಜಪೂತ್ ಅವರನ್ನು ತಳ್ಳಿದರು. ಅವರು ನನ್ನ ಮೇಲೆ ಬಿದ್ದರು. ಈ ವೇಳೆ ನಾನು ಗಾಯಗೊಂಡಿದ್ದೆ. ಇದೀಗ ಆರೋಗ್ಯ ಸ್ಥಿತಿ ಚೆನ್ನಾಗಿದೆ. ಆದರೆ ತಲೆಗೆ ಆಗಿರುವ ಪೆಟ್ಟು ಇನ್ನೂ ಸಂಪೂರ್ಣವಾಗಿ ಗುಣಮುಖವಾಗಿಲ್ಲ‘ ಎಂದು ಪ್ರತಾಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
.ಜನವರಿಯಲ್ಲಿ GSLV ಯೋಜನೆ; ಶ್ರೀಹರಿಕೋಟಾದಿಂದ ಚಾರಿತ್ರಿಕ 100ನೇ ಉಡಾವಣೆ: ಸೋಮನಾಥ್.ಅಲ್ಲು ಅರ್ಜುನ್ ಜಾಮೀನು ಅರ್ಜಿ: ಆದೇಶ ಕಾಯ್ದಿರಿಸಿದ ಕೋರ್ಟ್.
‘ಸಂವಿಧಾನ ಶಿಲ್ಪಿ’ ಡಾ. ಬಿ.ಆರ್ ಅಂಬೇಡ್ಕರ್ ಕುರಿತು ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ‘ಇಂಡಿಯಾ’ ಬಣದ ಸಂಸದರು ನೀಲಿ ಬಣ್ಣದ ಬಟ್ಟೆ ಧರಿಸಿ ಡಿಸೆಂಬರ್ 19ರಂದು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು.

ಇನ್ನೊಂದೆಡೆ, ಅಂಬೇಡ್ಕರ್ ಅವರನ್ನು ಅವಮಾನಿಸಿರುವ ಪ್ರತಿಪಕ್ಷ ಕಾಂಗ್ರೆಸ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ಘೋಷಣೆಗಳನ್ನು ಕೂಗುತ್ತ, ಫಲಕಗಳನ್ನು ಹಿಡಿದು ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಸಂಸದರು ಸಂಸತ್ತಿನ ಆವರಣದೊಳಗೆ ಪ್ರತಿಭಟಿಸಿದ್ದರು.

ಇಂಡಿಯಾ’ ಬಣದ ಸದಸ್ಯರು ಮೊದಲಿಗೆ ಸಂಸತ್ತಿನ ಆವರಣದಲ್ಲಿರುವ ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಯ ಬಳಿ ‘ಜೈ ಭೀಮ್’ ಮತ್ತು ‘ಅಮಿತ್ ಶಾ ಮಾಫಿ ಮಾಂಗೋ’ ಎಂಬ ಪೋಸ್ಟರ್ಗಳು ಹಾಗೂ ಅಂಬೇಡ್ಕರ್ ಅವರ ಭಾವಚಿತ್ರವನ್ನು ಹಿಡಿದು ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆ ನಡೆಸುತ್ತಿದ್ದ ‘ಇಂಡಿಯಾ’ ಬಣ ಸಂಸದರು ಹಾಗೂ ಆಡಳಿತಾರೂಢ ಎನ್ಡಿಎ ಮೈತ್ರಿಕೂಟದ ಸಂಸದರು ಸಂಸತ್ತಿನ ಮಕರ ದ್ವಾರ ಬಳಿ ಮುಖಾಮುಖಿಯಾಗಿದ್ದು, ಸಂಸತ್ ಭವನದ ಆವರಣದಲ್ಲಿ ತಳ್ಳಾಟ ಮತ್ತು ನೂಕುನುಗ್ಗಲಿಗೆ ಕಾರಣವಾಯಿತು. ಈ ವೇಳೆ ಪ್ರತಾಪ್ ಅವರು ಗಾಯಗೊಂಡಿದ್ದರು.
.ISRO ಡಾಕಿಂಗ್ ಸ್ಪೇಡೆಕ್ಸ್ ಯೋಜನೆ: ಯಶಸ್ವಿ ಉಡ್ಡಯನ.ಬಾಂಗ್ಲಾ ಗಡಿ ಉದ್ವಿಗ್ನ: ಮ್ಯಾನ್ಮಾರ್ ಸರ್ಕಾರ, ಬಂಡುಕೋರ ಗುಂಪಿನ ಮಾತುಕತೆ.ಇಂಡಿಗೊ ವಿಮಾನದಲ್ಲಿ ಎ.ಸಿ ಅವ್ಯವಸ್ಥೆ: ಮೋಹನ್ದಾಸ್ ಪೈ ಟೀಕೆ.ಖಾಸಗಿತನ ಗೌರವಿಸಿ ಸಿಂಗ್ ಅಸ್ಥಿ ವಿಸರ್ಜನೆಯಲ್ಲಿ ಭಾಗಿಯಾಗಿಲ್ಲ: ಕಾಂಗ್ರೆಸ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.