ನವದೆಹಲಿ: ಜರ್ಮನಿ ಭೇಟಿಯ ಸಂದರ್ಭದಲ್ಲಿ ಭಾರತದ ಶತ್ರುಗಳೊಂದಿಗೆ ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಮಾತುಕತೆ ನಡೆಸಿದ್ದಾರೆ ಎಂದು ಶನಿವಾರ ಆರೋಪಿಸಿರುವ ಬಿಜೆಪಿ, ‘ಅಂಥ ಶಕ್ತಿಗಳೊಂದಿಗೆ ಕೈಜೋಡಿಸುವ ಮೂಲಕ ಅವರು ದೇಶದ ವಿರುದ್ಧ ಯಾವ ರೀತಿ ಪಿತೂರಿ ನಡೆಸುತ್ತಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ.

ಬರ್ಲಿನ್ನ ಹರ್ಟಿ ಶಾಲೆಯ ಅಧ್ಯಕ್ಷ ಕಾರ್ನೊಲ್ಲಿಯ ವೋಲ್ ಅವರ ಜೊತೆಗೆ ರಾಹುಲ್ ಇರುವ ಚಿತ್ರವನ್ನು ಸುದ್ದಿಗೋಷ್ಠಿಯಲ್ಲಿ ತೋರಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಅವರು, ‘ನಮ್ಮ ಆರೋಪಕ್ಕೆ ಇದು ಪುರಾವೆ’ ಎಂದರು.

‘ಅಮೆರಿಕದ ಶತಕೋಟ್ಯಧಿಪತಿ ಹೂಡಿಕೆದಾರ ಜಾರ್ಜ್ ಸೋರೊಸ್ ಅವರ ‘ಓಪನ್ ಸೊಸೈಟಿ ಪೌಂಢೇಷನ್’ನಿಂದ ಹಣಕಾಸಿನ ನೆರವು ಪಡೆಯುತ್ತಿರುವ ಸೆಂಟ್ರಲ್ ಯುರೋಪ್ ವಿಶ್ವವಿದ್ಯಾಲಯದ ಟ್ರಸ್ಟಿಗಳಲ್ಲಿ ಕಾರ್ನೊಲ್ಲಿಯ ಕೂಡ ಒಬ್ಬರು’ ಎಂದು ಗೌರವ್ ತಿಳಿಸಿದರು.

‘ಸೋರೊಸ್ ಭಾರತ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಮತ್ತು ಭಾರತದ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ಹಾನಿಗೊಳಿಸಲು ಬೇಕಾದ ಆರ್ಥಿಕ ನೆರವನ್ನು ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಭಾರತದ ವಿರೋಧಿ ಶಕ್ತಿಗಳನ್ನು ಭೇಟಿ ಮಾಡಿ, ಭಾರತದ ಮಣ್ಣನ್ನು ಅವಮಾನಿಸುವ ವ್ಯಕ್ತಿ ಇದ್ದರೆ ಅದು ರಾಹುಲ್ ಮಾತ್ರ. ಜಾರ್ಜ್ ಸೋರೊಸ್ ಮತ್ತು ರಾಹುಲ್ ಎರಡು ದೇಹ, ಒಂದು ಆತ್ಮವಿದ್ದಂತೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.