ಕೊಲಂಬೊ: ಆಸ್ಟ್ರೇಲಿಯಾ ತಂಡವು ಶುಕ್ರವಾರ ಟಿ20 ವಿಶ್ವಕಪ್ ‘ಬಿ ಗುಂಪಿನ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶ ನೀಡಬಲ್ಲ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ. ಈ ಪಂದ್ಯ ಗೆದ್ದು ಸೂಪರ್ ಎಂಟರ ಹಂತ ತಲುಪುವ ಗುರಿಯಲ್ಲಿರುವ ಆಸ್ಟ್ರೇಲಿಯಾ ತಂಡವು ನಾಯಕ ಮಿಚೆಲ್ ಮಾರ್ಷ್ ಅವರ ಫಿಟ್ನೆಸ್ ಮೇಲೆ ನಿಗಾ ಇಟ್ಟಿದೆ.

ಐರ್ಲೆಂಡ್ ತಂಡದ ವಿರುದ್ಧ ಬುಧವಾರ ವಿಶ್ವಕಪ್ನ ಮೊದಲ ಪಂದ್ಯ ಆಡಿದ್ದ ಆಸ್ಟ್ರೇಲಿಯಾ ತಂಡದಲ್ಲಿ ಆಡಲು ಮಾರ್ಷ್ ಅವರಿಗೆ ಸಾಧ್ಯವಾಗಿರಲಿಲ್ಲ. ಅವರಿಗೆ ಆರೋಗ್ಯದ ಸಮಸ್ಯೆಯಿದ್ದು, ಚೇತರಿಕೆಗೆ ಸಮಯ ತಗಲುತ್ತಿದೆ. ಹೀಗಾಗಿ ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರನ್ನು ತಂಡ ಕರೆಸಿಕೊಂಡಿದೆ.

ಮಾರ್ಷ್ ಆಡದಿದ್ದರೂ, ಆಸ್ಟ್ರೇಲಿಯಾ ತಂಡ ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನ ನೀಡಿ 67 ರನ್ಗಳಿಂದ ಸುಲಭವಾಗಿ ಜಯಗಳಿಸಿತ್ತು. ಮೊದಲು ಆಡಿ 182 ರನ್ ಪೇರಿಸಿದ ಮೇಲೆ ವೇಗದ ಬೌಲರ್ ನೇಥನ್ ಎಲಿಸ್ ಮತ್ತು ಸ್ಪಿನ್ನರ್ ಆ್ಯಡಂ ಜಂಪಾ ಅವರು ತಲಾ ನಾಲ್ಕು ವಿಕೆಟ್ ಉರುಳಿಸಿ ಗೆಲುವನ್ನು ತ್ವರಿತಗೊಳಿಸಿದ್ದರು.

ಆದರೆ ಅನುಭವಿ ಬ್ಯಾಟರ್ಗಳಾದ ಟ್ರಾವಿಸ್ ಹೆಡ್, ಗ್ಲೆನ್ ಮ್ಯಾಕ್ಸ್ವೆಲ್ ಅವರಿಂದ ತಂಡವು ಹೆಚ್ಚಿನ ಕೊಡುಗೆ ನಿರೀಕ್ಷಿಸುತ್ತಿದೆ. ಸ್ಮಿತ್ ಅವರು ಬಿಗ್ಬ್ಯಾಷ್ನಲ್ಲಿ ಸಿಡ್ನಿ ಸಿಕ್ಸರ್ ಪರ ಉತ್ತಮವಾಗಿ ಆಡಿರುವುದು ತಂಡಕ್ಕೆ ಸಮಾಧಾನ ಮೂಡಿಸಿದೆ. 6 ಇನಿಂಗ್ಸ್ಗಳಲ್ಲಿ ಅವರು 299 ರನ್ ಕಲೆಹಾಕಿದ್ದರು.

ಜಿಂಬಾಬ್ವೆ ಈ ಹಿಂದೆ ಪ್ರಬಲ ತಂಡಗಳಿಗೆ ಬಿಸಿಮುಟ್ಟಿಸಿದ ನಿದರ್ಶನಗಳು ಇರುವ ಕಾರಣ ಆಸ್ಟ್ರೇಲಿಯಾ ತಂಡವು ಅನುಭವಿ ಆಟಗಾರರಿಗೆ ಉತ್ತಮ ಪ್ರದರ್ಶನ ನಿರೀಕ್ಷಿಸಿದೆ. ಒಮಾನ್ ತಂಡ ದುರ್ಬಲವಾದರೂ, ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ಆ ತಂಡವನ್ನು ಸದೆಬಡಿದ ರೀತಿ ಗಮನ ಸೆಳೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.