ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಹ್ಲುಖಾನ್‌ ಪ್ರಕರಣ: ತನಿಖೆ ಲೋಪ ಪತ್ತೆಗೆ ಎಸ್ಐಟಿ ರಚನೆ

Last Updated 17 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಜೈಪುರ: ಪೆಹ್ಲುಖಾನ್‌ ಮೇಲಿನ ಗುಂಪು ಹಲ್ಲೆ ಪ್ರಕರಣದ ತನಿಖೆಯ ಲೋಪಗಳ ಪತ್ತೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲು ಅಶೋಕ್‌ ಗೆಹ್ಲೋಟ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ತೀರ್ಮಾನಿಸಿದೆ.

ಡಿಐಜಿ ನಿತಿನ್‌ ದೀಪ್‌ ಬ್ಲಗನ್‌ ನೇತೃತ್ವದ ತಂಡದಲ್ಲಿ ಸಿಐಡಿ ಘಟಕದ ಎಸ್‌ಪಿ ಸಮೀರ್ ಕುಮಾರ್ ಸಿಂಗ್ ಮತ್ತು ಹೆಚ್ಚುವರಿ ಎಸ್‌ಪಿ (ಗುಪ್ತದಳ) ಸಮೀರ್ ದುಬೆ ಇದ್ದಾರೆ. ಹೆಚ್ಚುವರಿ ಡಿಜಿಪಿ (ಅಪರಾಧ) ಈ ತಂಡದ ಉಸ್ತುವಾರಿ ವಹಿಸಲಿದ್ದು, 15 ದಿನದಲ್ಲಿ ವರದಿ ಸಲ್ಲಿಸಬೇಕು ಎಂದು ಸರ್ಕಾರ ಈ ತಂಡಕ್ಕೆ ಸೂಚಿಸಿದೆ.

ಹೈನುಗಾರಿಕೆ ನಡೆಸುತ್ತಿದ್ದ ಪೆಹ್ಲುಖಾನ್‌ ಅವರ ಮೇಲಿನ ಗುಂಪು ಹಲ್ಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಆರು ಜನರನ್ನು ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಖುಲಾಸೆಗೊಳಿಸಿತ್ತು.

ಆರು ಮಂದಿ ಆರೋಪಿಗಳು ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದು ಸೆಲ್‌ಫೋನ್‌ನಲ್ಲಿ ದಾಖಲಾಗಿತ್ತು.ಆದರೆ, ವಿಚಾರಣೆ ನಡೆಸಿದ ಅಲ್ವಾರ್‌ ಕೋರ್ಟ್‌, ‘ವಿಡಿಯೊ ಸಾಕ್ಷ್ಯವನ್ನು ಮಾನ್ಯ ಮಾಡಲಾಗದು’ ಎಂದಿತು. ಗೋವು ಸಾಗಣೆ ಶಂಕೆ ಮೇಲೆ2017ರ ಏಪ್ರಿಲ್‌1ರಂದು 55 ವರ್ಷ ವಯಸ್ಸಿನ ಪೆಹ್ಲುಖಾನ್‌ ಅವರ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ಪೊಲೀಸರು ವಿಡಿಯೊ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದರು.

ಸರ್ಕಾರದ ಪರ ವಾದ ಮಂಡಿಸಿದ ವಕೀಲ ಹುಕಂ ಚಾಂದ್ ಶರ್ಮಾ ಅವರು, ‘ಪೆಹ್ಲುಖಾನ್‌ ತನ್ನ ಆರಂಭಿಕ ಹೇಳಿಕೆಯಲ್ಲಿ ಆರೋಪಿಗಳ ಹೆಸರು ಉಲ್ಲೇಖಿಸಿಲ್ಲ’ ಎಂಬುದನ್ನು ಕೋರ್ಟ್‌ ಗಮನಕ್ಕೆ ತಂದರು. ಇದರ ಆಧಾರದಲ್ಲಿ ಬಂಧಿತರಿಗೆ ‘ಅನುಮಾನದ ಲಾಭ’ ನೀಡಿದ ಕೋರ್ಟ್‌ ಎಲ್ಲರನ್ನು ಖುಲಾಸೆಗೊಳಿಸಿತ್ತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT