ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಸ್ಥಾನದಲ್ಲಿ MiG-29 ಯುದ್ಧ ವಿಮಾನ ಪತನ: ಪೈಲಟ್ ಸುರಕ್ಷಿತ

Published : 3 ಸೆಪ್ಟೆಂಬರ್ 2024, 3:30 IST
Last Updated : 3 ಸೆಪ್ಟೆಂಬರ್ 2024, 3:30 IST
ಫಾಲೋ ಮಾಡಿ
Comments

ಬಾರ್ಮರ್ (ರಾಜಸ್ಥಾನ): ಭಾರತೀಯ ವಾಯುಪಡೆಯ MiG-29 ಯುದ್ಧ ವಿಮಾನ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಪತನಗೊಂಡಿದೆ. ವಿಮಾನದಲ್ಲಿದ್ದ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಭಾರತೀಯ ವಾಯುಪಡೆ(IAF) ತಿಳಿಸಿದೆ.

ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಸೋಮವಾರ ರಾತ್ರಿ ಎಂದಿನಂತೆ ತನ್ನ ದಿನನಿತ್ಯದ ರಾತ್ರಿ ತರಬೇತಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ವೇಳೆ ವಿಮಾನ ಪತನಗೊಂಡಿದೆ. ಅಪಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಬಾರ್ಮರ್ ಜಿಲ್ಲಾಧಿಕಾರಿ ನಿಶಾಂತ್ ಜೈನ್ ತಿಳಿಸಿದ್ದಾರೆ.

'ಬಾರ್ಮರ್ ಸೆಕ್ಟರ್‌ನಲ್ಲಿ ರಾತ್ರಿ ತರಬೇತಿ ಕಾರ್ಯಾಚರಣೆಯ ಸಮಯದಲ್ಲಿ, ಭಾರತೀಯ ವಾಯುಪಡೆಯ MiG-29 ಯುದ್ಧ ವಿಮಾನ ತಾಂತ್ರಿಕ ದೋಷದಿಂದ ಪತನಗೊಂಡಿದೆ. ಪೈಲಟ್ ಸುರಕ್ಷಿತವಾಗಿದ್ದಾರೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಭಾರತೀಯ ವಾಯುಪಡೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ಮಾರ್ಚ್ 12 ರಂದು, ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ (ಎಲ್‌ಸಿಎ) ತೇಜಸ್ ತರಬೇತಿ ಕಾರ್ಯಾಚರಣೆಯ ವೇಳೆ ರಾಜಸ್ಥಾನದ ಜೈಸಲ್ಮೇರ್ ಬಳಿ ಅಪಘಾತಕ್ಕೀಡಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT