ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಸಿಕ್‌ನಲ್ಲಿ ಸುಖೋಯ್ ಯುದ್ಧ ವಿಮಾನ ಪತನ: ಪೈಲಟ್‌ಗಳು ಸುರಕ್ಷಿತ

Published 4 ಜೂನ್ 2024, 10:41 IST
Last Updated 4 ಜೂನ್ 2024, 10:41 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ ಸುಖೋಯ್ ಯುದ್ಧ ವಿಮಾನ ಮಂಗಳವಾರ ಪತನಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೈಲಟ್ ಹಾಗೂ ಸಹ ಪೈಲಟ್ ಸುರಕ್ಷಿತವಾಗಿ ವಿಮಾನದಿಂದ ಹೊರ ಬಂದಿದ್ದಾರೆ ಎಂದು ನಾಸಿಕ್ ವಲಯದ ವಿಶೇಷ ತನಿಖಾಧಿಕಾರಿ ಡಾ.ಕರಾಳೆ ಪಿಟಿಐಗೆ ತಿಳಿಸಿದ್ದಾರೆ.

ಶಿರಸ್ಗಾಂವ್ ಗ್ರಾಮದ ಬಳಿಯ ಹೊಲದಲ್ಲಿ ವಿಮಾನ ಪತನಗೊಂಡಿದೆ ಎಂದು ಐಪಿಎಸ್ ಅಧಿಕಾರಿ ತಿಳಿಸಿದ್ದಾರೆ.

'ವಿಂಗ್ ಕಮಾಂಡರ್ ಬೋಕಿಲ್ ಹಾಗೂ ಕಮಾಂಡರ್ ಬಿಸ್ವಾಸ್ ಅವರಿದ್ದ ವಿಮಾನ ನಿಫಾದ್ ತಹಸಿಲ್‌ನ ಶಿರಸ್ಗಾಂವ್ ಗ್ರಾಮದ ಜಮೀನಿನಲ್ಲಿ ಮಧ್ಯಾಹ್ನ 1.20ಕ್ಕೆ ಪತನಗೊಂಡಿತು. ಇಬ್ಬರೂ ಪೈಲಟ್‌ಗಳು ಸುರಕ್ಷಿತವಾಗಿ ವಿಮಾನದಿಂದ ಹೊರಬಂದಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಚ್‌ಎಎಲ್‌ ಆಸ್ಪತ್ರೆಗೆ ರವಾನಿಸಲಾಗಿದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪತನಗೊಂಡ ಬಳಿಕ ವಿಮಾನಕ್ಕೆ ಬೆಂಕಿ ತಗುಲಿದ್ದು, ಸದ್ಯ ಬೆಂಕಿಯನ್ನು ನಂದಿಸಲಾಗಿದೆ. ಘಟನಾ ಸ್ಥಳಕ್ಕೆ ಭಾರತೀಯ ವಾಯುಪಡೆ, ಎಚ್‌ಎಎಲ್ ಭದ್ರತೆ ಮತ್ತು ಎಚ್‌ಎಎಲ್ ತಾಂತ್ರಿಕ ಘಟಕದ ತಂಡಗಳು ಭೇಟಿ ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT