ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆ: ವಿಗ್ರಹದ ಮೇಲೆ ನಮಗೆ ಹಕ್ಕು ಇದೆ, ಮೇಲ್ಮನವಿ ಸಲ್ಲಿಸಿದ ತಂತ್ರಿ ಕುಟುಂಬ

Last Updated 13 ಅಕ್ಟೋಬರ್ 2018, 7:43 IST
ಅಕ್ಷರ ಗಾತ್ರ

ನವದೆಹಲಿ: ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶಾನುಮತಿ ನೀಡಿದ ಸುಪ್ರೀಂಕೋರ್ಟ್ ತೀರ್ಪು ಪ್ರಶ್ನಿಸಿತಂತ್ರಿ ಕುಟುಂಬ ಮೇಲ್ಮನವಿ ಸಲ್ಲಿಸಿದೆ. ಶಬರಿಮಲೆಯ ತಂತ್ರಿ ರಾಜೀವರು ಕಂದರಾರ್ ಮತ್ತು ಮೋಹನರು ಕಂದರಾರ್ ಪ್ರತ್ಯೇಕವಾಗಿ ಮೇಲ್ಮನವಿಗಳನ್ನು ಸಲ್ಲಿಸಿದ್ದಾರೆ.

ಸುಪ್ರೀಂಕೋರ್ಟ್ ನ್ಯಾಯಪೀಠವು ಇಲ್ಲಿನ ನಂಬಿಕೆ ಆಚರಣೆಗಳನ್ನು ಪರಿಗಣಿಸಿಲ್ಲ.ದೇವಾಲಯದ ಆಚಾರ-ವಿಚಾರಗಳ ಬಗ್ಗೆ ಅಂತಿಮ ನಿರ್ಣಯಗಳನ್ನು ಕೈಗೊಳ್ಳುವ ಹಕ್ಕು ತಂತ್ರಿ ಕುಟುಂಬದ್ದು.ವಿಗ್ರಹ ಆರಾಧನೆ ಹಿಂದೂ ಧರ್ಮದಲ್ಲಿ ಅಗತ್ಯ.ವಿಗ್ರಹ ಮೇಲೆ ನಮ್ಮ ಹಕ್ಕು ಇದೆ.ಸಂವಿಧಾನದ 25 (1) ಪರಿಚ್ಛೇದ ಪ್ರಕಾರ ವಿಗ್ರಹ ಮೇಲಿರುವ ಹಕ್ಕನ್ನು ಸುಪ್ರೀಂಕೋರ್ಟ್ ಪರಿಗಣಿಸಿಲ್ಲ ಎಂದು ಮೇಲ್ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಸುಪ್ರೀಂಕೋರ್ಟ್ ತೀರ್ಪು ಪ್ರಶ್ನಿಸಿ ಎನ್‍ಎಸ್‍ಎಸ್ ಮತ್ತು ಪಂದಳಂ ರಾಜಮನೆತನ ಮೇಲ್ಮನವಿ ಸಲ್ಲಿಸಿತ್ತು.ಅದೇ ವೇಳೆ ಈ ತಿಂಗಳ 28ರ ನಂತರವೇ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸ್ವೀಕರಿಸಲಾಗುವುದು.ಆದಾಗ್ಯೂ ಶೀಘ್ರದಲ್ಲೇ ನಮ್ಮ ಅರ್ಜಿ ಸ್ವೀಕರಿಸಬೇಕೆಂಬ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT