ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್‌ಎಸ್ ಹಿನ್ನೆಲೆಯ ಕುಲಪತಿಗಳ ನೇಮಕ ಸ್ವಜನಪಕ್ಷಪಾತಕ್ಕೆ ಉದಾಹರಣೆ: ಕಪಿಲ್ ಸಿಬಲ್‌

ಪ್ರಧಾನಿ ಮೋದಿ ಹೇಳಿಕೆಗೆ ಕಪಿಲ್‌ ಸಿಬಲ್‌ ತಿರುಗೇಟು
Published 17 ಮೇ 2023, 13:38 IST
Last Updated 17 ಮೇ 2023, 13:38 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವವಿದ್ಯಾಲಯಗಳಲ್ಲಿ ಆರ್‌ಎಸ್‌ಎಸ್‌ ಹಿನ್ನೆಲೆ, ಚಿಂತನೆ ಹೊಂದಿರುವ ಕುಲಪತಿ ಮತ್ತು ಶಿಕ್ಷಕರ ನೇಮಕಾತಿಯು ಸ್ವಜನಪಕ್ಷಪಾತಕ್ಕೆ ತಾಜಾ ಉದಾಹರಣೆ ಎಂದು ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್‌ ಬುಧವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಮೂಲಕ, ‘ತಮ್ಮ ಸರ್ಕಾರದಲ್ಲಿ ತಂದ ಆಮೂಲಾಗ್ರ ಬದಲಾವಣೆಗಳಿಂದ ನೇಮಕಾತಿ ವ್ಯವಸ್ಥೆಯಲ್ಲಿದ್ದ ಸ್ವಜನಪಕ್ಷಪಾತ ಕೊನೆಯಾಗಿದೆ’ ಎಂದಿದ್ದ ಪ್ರಧಾನಿ ಮೋದಿ ಅವರ ಹೇಳಿಕೆಗೆ ತಿರುಗೇಟು ನೀಡಿದರು.

‘ಪ್ರಧಾನಿ ಮೋದಿ ಅವರು ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ಕೊನೆಯಾಗಿದೆ ಎಂದಿದ್ದಾರೆ. ಅಭಿನಂದನೆಗಳು. ಆದರೆ ವಿಶ್ವವಿದ್ಯಾಲಯಗಳಲ್ಲಿ ಆರ್‌ಎಸ್‌ಎಸ್‌ ಹಿನ್ನೆಲೆಯ ಕುಲಪತಿ ಮತ್ತು ಶಿಕ್ಷಕರ ನೇಮಕಾತಿಯು ಸ್ವಜನಪಕ್ಷಪಾತಕ್ಕೆ ತಾಜಾ ಉದಾಹರಣೆ. ಇದಕ್ಕೆ ಏನು ಹೇಳುತ್ತೀರಿ’ ಎಂದು ಸಿಬಲ್‌ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT