ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ವಿಸ್ತಾರ ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಿದ್ದ ಎಟಿಸಿ, ತಪ್ಪಿದ ಅವಘಡ

Published 23 ಆಗಸ್ಟ್ 2023, 15:22 IST
Last Updated 23 ಆಗಸ್ಟ್ 2023, 15:22 IST
ಅಕ್ಷರ ಗಾತ್ರ

ನವದೆಹಲಿ: ಏರ್‌ ಟ್ರಾಫಿಕ್‌ ಕಂಟ್ರೋಲರ್‌ (ಎಟಿಸಿ) ಅಜಾಗರೂಕತೆಯಿಂದ ಅನುಮತಿ ನೀಡಿದ ಪರಿಣಾಮ ಸಂಭವಿಸಲಿದ್ದ, ವಿಸ್ತಾರ ಸಂಸ್ಥೆಯ ಎರಡು ವಿಮಾನಗಳನ್ನು ಒಳಗೊಂಡ ಅವಘಡವೊಂದನ್ನು ಬುಧವಾರ ತಪ್ಪಿಸಲಾಗಿದೆ.

ಈ ಘಟನೆ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ತನಿಖೆ ನಡೆಸಲಿದ್ದು, ಕರ್ತವ್ಯದಲ್ಲಿದ್ದ ಏರ್‌ ಟ್ರಾಫಿಕ್‌ ಕಂಟ್ರೋಲರ್‌ ಅವರ ಕೆಲಸದ ಪಾಳಿಯನ್ನು ಬದಲಾಯಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಹಮದಾಬಾದ್‌ನಿಂದ ಬಂದಿದ್ದ ವಿಮಾನವು (ವಿಟಿ1725) ‘29ಎಲ್‌’ ರನ್‌ವೇನಲ್ಲಿ ಇಳಿದಿತ್ತು. ಈ ವಿಮಾನ ರನ್‌ವೇ ‘29ಆರ್‌’ ಮೂಲಕ ಹಾಯ್ದು ಹೋಗಲು ಎಟಿಸಿ ಅನುಮತಿ ನೀಡಿದ್ದರು.

ಇನ್ನೊಂದೆಡೆ, ‘29ಆರ್’ ರನ್‌ವೇ ಮೂಲಕವೇ ಟೇಕಾಫ್‌ ಆಗಲು ದೆಹಲಿ–ಬಾಗ್‌ಡೋಗ್ರ ವಿಮಾನಕ್ಕೆ(ವಿಟಿ1725) ಅನುಮತಿ ನೀಡಿದ್ದರು. ಎರಡೂ ವಿಮಾನಗಳು ಹೊರಟಿದ್ದರೆ ರಭಸದಿಂದ ಡಿಕ್ಕಿಯಾಗುವ ಸಾಧ್ಯತೆ ಇತ್ತು.

ಈ ಬಗ್ಗೆ ಅಹಮದಾಬಾದ್‌ನಿಂದ ಬಂದಿಳಿದಿದ್ದ ವಿಮಾನದ ಮಹಿಳಾ ಪೈಲೆಟ್‌ ಮಾಹಿತಿ ನೀಡಿದ ಕೂಡಲೇ ಎಚ್ಚೆತ್ತುಕೊಂಡ ಎಟಿಸಿ, ಟೇಕಾಫ್‌ ಆಗದಂತೆ ಬಾಗ್‌ಡೋಗ್ರಕ್ಕೆ ಹೊರಟಿದ್ದ ವಿಮಾನಕ್ಕೆ ಸೂಚನೆ ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

 ಈ ಬಗ್ಗೆ ವಿಸ್ತಾರ ವಿಮಾನ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT