ತಿರುವನಂತಪುರ:ಶಬರಿಮಲೆಗೆ ಪ್ರವೇಶಿಸುವ ಮಹಿಳೆಯರ ದೇಹವನ್ನು ಎರಡು ಭಾಗವಾಗಿ ಸೀಳಬೇಕು ಎಂದು ಕರೆ ನೀಡಿದ್ದಮಲಯಾಳಂ ಸಿನಿಮಾ ನಟ ಕೊಲ್ಲಂ ತುಳಸಿ ವಿರುದ್ಧ ಕೇರಳ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

2016ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯೂ ಆಗಿದ್ದ ತುಳಸಿ ಹೇಳಿಕೆ ವಿರುದ್ಧ ಕೊಲ್ಲಂನ ಸ್ಥಳೀಯ ಡಿವೈಎಫ್ಐ ನಾಯಕ ದೂರು ನೀಡಿದ್ದರು. ಇದರ ಬೆನ್ನಲ್ಲೇ ತುಳಸಿ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 295ಎ (ಧಾರ್ಮಿಕ ಭಾವನೆಗಳಿಗೆ ಪ್ರಚೋದನೆ), 298 (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಹೇಳಿಕೆಗಳನ್ನು ನೀಡುವುದು), 354ಎ (ಲಿಂಗಾಧಾರಿತ ಹೇಳಿಕೆ ನೀಡುವುದು) ಮತ್ತು ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 119ಎ ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಕೇರಳ ರಾಜ್ಯ ಮಹಿಳಾ ಆಯೋಗವೂ ತುಳಸಿ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದೆ.

ಈ ಮಧ್ಯೆ, ಹೇಳಿಕೆ ಬಗ್ಗೆ ಕೊಲ್ಲಂ ತುಳಸಿ ಕ್ಷಮೆ ಕೋರಿದ್ದಾರೆ. ‘ನಾನು ಅಂತಹ ಹೇಳಿಕೆ ನೀಡಬಾರದಿತ್ತು. ತೀವ್ರ ಭಕ್ತಿಯಿಂದಾಗಿ ಆ ರೀತಿ ಪ್ರತಿಕ್ರಿಯಿಸಿದ್ದೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುವುದಲ್ಲದೆ ಅದನ್ನು ಹಿಂಪಡೆಯುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಕೊಲ್ಲಂ ಜಿಲ್ಲೆಯ ಚವರ ಎಂಬಲ್ಲಿ ಇತ್ತೀಚೆಗೆ ನಡೆದ ವಿಶ್ವಾಸ ಸಂರಕ್ಷಣಾ ಜಾಥಾದಲ್ಲಿ ಮಾತನಾಡಿದ್ದ ತುಳಸಿ,ಶಬರಿಮಲೆ ಪ್ರವೇಶಿಸುವ ಹಿಳೆಯರನ್ನು ಎರಡು ತುಂಡಾಗಿ ಸೀಳಿ ಒಂದು ಭಾಗವನ್ನು ದೆಹಲಿಗೂ ಇನ್ನೊಂದು ಭಾಗವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕೋಣೆಗೂ ಎಸೆಯಬೇಕು.ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಿ ತೀರ್ಪು ನೀಡಿದ ನ್ಯಾಯಮೂರ್ತಿಗಳು ಮೂಢರು ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.