ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಾಮಾನ್ಯರ ನಡುವೆ ಬೆರೆಯಿರಿ: ಕಾರ್ಯಕರ್ತರಿಗೆ ಸಚಿನ್ ಪೈಲಟ್ ಕರೆ

Published 29 ಏಪ್ರಿಲ್ 2023, 16:02 IST
Last Updated 29 ಏಪ್ರಿಲ್ 2023, 16:02 IST
ಅಕ್ಷರ ಗಾತ್ರ

ಜೈಪುರ: ‘ರಾಜ್ಯ ವಿಧಾನಸಭಾ ಚುನಾವಣೆಯು ಸಮೀಪದಲ್ಲಿದ್ದು, ಜನರ ಮಧ್ಯೆ ತೆರಳಿ ಅವರ ಮಾತುಗಳನ್ನು ಆಲಿಸಬೇಕು’ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಶನಿವಾರ ಕರೆ ನೀಡಿದ್ದಾರೆ. 

ಪೈಲಟ್ ಅವರು ಹಿಂದಿನ ದಿನ ವಿಧಾನಸಭಾ ಸ್ಪೀಕರ್ ಸಿಪಿ ಜೋಶಿ ಅವರನ್ನೂ ಭೇಟಿಯಾದರು.

ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಈ ವಾರ ಬದಲಾವಣೆಗಳಾಗಿದ್ದು, ವಾರದ ಆರಂಭದಲ್ಲಿ ಪಕ್ಷವು ಅಮೃತಾ ಧವನ್ ಮತ್ತು ವೀರೇಂದ್ರ ಸಿಂಗ್ ರಾಥೋಡ್ ಅವರನ್ನು ರಾಜಸ್ಥಾನದ ಎಐಸಿಸಿ ಸಹ- ಪ್ರಭಾರಿಯಾಗಿ ನೇಮಿಸಿದೆ. ಅಂತೆಯೇ ಸುಖಜಿಂದರ್ ಸಿಂಗ್ ರಾಂಧವಾ ಅವರು ರಾಜ್ಯದ ಉಸ್ತುವಾರಿಯಾಗಿ ಉಳಿದಿದ್ದಾರೆ.

‘ಸಂಘಟನೆಯಲ್ಲಿ ಕಾಲಕಾಲಕ್ಕೆ ಬದಲಾವಣೆಗಳು ಆಗುತ್ತಿರುತ್ತವೆ. ಚುನಾವಣೆಗೆ ಇನ್ನೂ ಆರು ತಿಂಗಳಿದೆ. ಎಐಸಿಸಿ ಪ್ರತಿನಿಧಿಗಳಾಗಲಿ, ಪಕ್ಷ ಸಂಘಟನೆಯ ಕೆಲಸ ನಿರ್ವಹಿಸುವವರಾಗಲಿ, ನಾವೆಲ್ಲರೂ ಜನರ ಜತೆಗೆ ಬೆರೆತು ಅವರ ಭಾವನೆಗಳನ್ನು ಅರಿತುಕೊಳ್ಳಬೇಕೆಂದು ನಾನು ಬಯಸುತ್ತೇನೆ’ ಎಂದು ಸಚಿನ್ ಹೇಳಿದ್ದಾರೆ.

ಕುಸ್ತಿ ಫೆಡರೇಷನ್ ಆಫ್ ಇಂಡಿಯಾ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ಬೆಂಬಲ ವ್ಯಕ್ತಪಡಿಸಿದ ಸಚಿನ್, ‘ಬಿಜೆಪಿ ತನ್ನ ಸಂಸದರನ್ನು ರಕ್ಷಿಸುತ್ತಿದೆ’ ಎಂದು ಆರೋಪಿಸಿದರು.

‘ಈ ಯುವಕರು ಪದಕಗಳನ್ನು ತಂದು ದೇಶವೇ ಹೆಮ್ಮೆ ಪಡುವಂತೆ ಮಾಡಿದಾಗ ಎಲ್ಲರೂ ಅವರ ಜೊತೆ ನಿಂತು ಯಶಸ್ಸನ್ನು ಹಂಚಿಕೊಳ್ಳುತ್ತಿದ್ದರು.ಆದರೆ ಇಂದು ಸಂಕಷ್ಟಕ್ಕೆ ಸಿಲುಕಿ ಗಂಭೀರ ಆರೋಪ ಮಾಡುತ್ತಿರುವಾಗ ಸರ್ಕಾರವು ನುಣುಚಿಕೊಂಡಿದೆ’ ಎಂದು ದೂರಿದರು.

ಕರ್ನಾಟಕದ ಬಿಜೆಪಿ ಶಾಸಕರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ವಿರುದ್ಧ ನೀಡಿರುವ ಹೇಳಿಕೆಗಳನ್ನು ಖಂಡಿಸಿದ ಪೈಲಟ್, ‘ರಾಜಕಾರಣದಲ್ಲಿ ಇಂಥ ಟೀಕೆಗಳು ಸರಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT