ನವದೆಹಲಿ: ‘ಕಾಯಂ ನೇಮಕಾತಿ ನಿರಾಕರಿಸಲಾಗಿದ್ದ ಮಹಿಳಾ ಅಧಿಕಾರಿ ಕವಿತಾ ಭಾಟಿ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಬಾರದು’ ಎಂದು ಕೇಂದ್ರ ಸರ್ಕಾರ ಹಾಗೂ ಭಾರತೀಯ ವಾಯುಸೇನೆಗೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.

ತಮ್ಮ ನೇಮಕಾತಿಯನ್ನು ಕಾಯಂ ಮಾಡದ ಕುರಿತು ಆಕ್ಷೇಪ ವ್ಯಕ್ತಪಡಿಸಿ ಕವಿತಾ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಮನ್ಮೋಹನ್ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿತು.

‘ವಿಂಗ್ ಕಮಾಂಡರ್ ನಿಖಿತಾ ಪಾಂಡೆ ಅವರ ಅರ್ಜಿಗೆ ಸಂಬಂಧಿಸಿ ಮೇ 22ರಂದು ನೀಡಿದ್ದ ಆದೇಶವನ್ನು ಉಲ್ಲೇಖಿಸಿದ ನ್ಯಾಯಾಲಯ, ‘ನಿಖಿತಾ ಅವರ ಪ್ರಕರಣದಂತೆಯೇ ಕವಿತಾ ಅವರು ಪ್ರಕರಣವೂ ಇದೆ. ಆದ್ದರಿಂದ, ಮುಂದಿನ ವಿಚಾರಣೆವರೆಗೂ ಕವಿತಾ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಬಾರದು’ ಎಂದು ಪೀಠ ಹೇಳಿತು.

ಮುಂದಿನ ವಿಚಾರಣೆಯನ್ನು ಆಗಸ್ಟ್ 6ಕ್ಕೆ ನ್ಯಾಯಾಲಯ ಮುಂದೂಡಿತು. ನಿಖಿತಾ ಅವರು ಆಪರೇಷನ್ ಬಾಲಾಕೋಟ್ ಮತ್ತು ಆಪರೇಷನ್ ಸಿಂಧೂರದ ಭಾಗವಾಗಿದ್ದರು. ಇವರಿಗೂ ಖಾಯಂ ನೇಮಕಾತಿ ನೀಡಲು ನಿರಾಕರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.