ಶ್ರೀನಗರ: ಕಾಶ್ಮೀರದ ಕುಪವಾಡಾ ಜಿಲ್ಲೆಯಲ್ಲಿ ಮೂರು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಭದ್ರತಾ ಪಡೆಗಳು ಭಾನುವಾರ ವಶಪಡಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಪವಾಡಾ ಜಿಲ್ಲೆಯ ತ್ರೆಹಗಾಮ್ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ (ಸಿಎಎಸ್ಒ) ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸ್ಫೋಟಕಗಳನ್ನು ಬಾಂಬ್ ನಿಷ್ಕ್ರಿಯ ದಳದ ಸಹಾಯದಿಂದ ನಾಶಪಡಿಸಲಾಗಿದೆ. ಈ ವೇಳೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
A joint team of security forces recovered four IEDs, 4 bundles of wire (10 metres long each) in Ladriwan area of Kupwara. Details awaited: Jammu and Kashmir Police pic.twitter.com/wLLbSr7Q7o