ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ: ಆಶು ಮಹರಾಜ್‌ ಬಂಧನ

Last Updated 14 ಸೆಪ್ಟೆಂಬರ್ 2018, 16:51 IST
ಅಕ್ಷರ ಗಾತ್ರ

ನವದೆಹಲಿ: ಮಹಿಳೆ ಮತ್ತು ಆಕೆಯಅಪ್ರಾಪ್ತೆ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕಾಗಿ ಸ್ವಯಂಘೋಷಿತ ದೇವಮಾನಆಶು ಮಹರಾಜ್‌ ಅವರನ್ನು ಗುರುವಾರ ಬಂಧಿಸಲಾಗಿದೆ.

‌‌‌‘ಈ ಪ್ರಕರಣಕ್ಕೆ ಸಂಬಂಧಿಸಿದಂತೆಆಶು ಮಹರಾಜ್‌ ಮಗ ಸಮರ್‌ ಖಾನ್‌ ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸ್‌ ಹೆಚ್ಚುವರಿ ಆಯುಕ್ತ ರಾಜೀವ್‌ ರಂಜನ್‌ ತಿಳಿಸಿದ್ದಾರೆ.

‘2008 ಮತ್ತು 2013 ರ ನಡುವೆ ಸ್ನೇಹಿತರು ಮತ್ತು ಆತನ ಮಗನ ಎದುರೇಆಶು ಮಹರಾಜ್‌ ನನ್ನ ಮೇಲೆ ಅತ್ಯಾಚಾರ ಎಸಗಿದ್ದ. ನಂತರ ಮಗಳನ್ನು ಜೊತೆಗೆ ಕರೆತರುವಂತೆ ಹೇಳಿದ್ದ ಆತನ, ಆಕೆಯ ಮೇಲೆಯೂ ಅತ್ಯಾಚಾರ ಎಸಗಿದ’ ಎಂದು ಸಂತ್ರಸ್ತ ಮಹಿಳೆ ತಿಳಿಸಿದ್ದಾರೆ.

ಕಳೆದ ವಾರ ಹಾಝ್ ಖಾಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಭಾನುವಾರ ಪ್ರಕರಣದ ತನಿಖೆಯನ್ನು ಅಪರಾಧ ಶಾಖೆಗೆ ವರ್ಗಾಯಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT