ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್‌ ವಿರೋಧಿ ಹೋರಾಟ: ಕೈಜೋಡಿಸಲು ರಾಜ್ಯಗಳಿಗೆ ಶಾ ಕರೆ

Last Updated 21 ಡಿಸೆಂಬರ್ 2022, 13:48 IST
ಅಕ್ಷರ ಗಾತ್ರ

ನವದೆಹಲಿ: ‘ಡ್ರಗ್ಸ್‌ ವಿರುದ್ಧದ ಹೋರಾಟಕ್ಕೆ ಕೇಂದ್ರ ಸರ್ಕಾರ ಸದಾ ಸನ್ನದ್ಧವಾಗಿದೆ. ರಾಜಕೀಯ ಮರೆತು ರಾಜ್ಯ ಸರ್ಕಾರಗಳುಈ ಕಾರ್ಯದಲ್ಲಿ ನಮ್ಮೊಂದಿಗೆ ಕೈಜೋಡಿಸಬೇಕು’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬುಧವಾರ ಹೇಳಿದರು.

ಡ್ರಗ್ಸ್‌ ಸಮಸ್ಯೆಗಳ ಕುರಿತು ಲೋಕಸಭೆಯಲ್ಲಿ ಬುಧವಾರ ಚರ್ಚೆ ನಡೆಯಿತು. ಈ ವೇಳೆ ಮಾತನಾಡಿದ ಅವರು, ‘ಡ್ರಗ್ಸ್‌ ಕುರಿತಾಗಿ ಕೇಂದ್ರದವು ಶೂನ್ಯ ಸಹಿಷ್ಣು ನೀತಿಯನ್ನು ಹೊಂದಿದೆ. ಎಷ್ಟೇ ದೊಡ್ಡ ಮಟ್ಟದ ಡ್ರಗ್ಸ್‌ ವ್ಯಾಪಾರಿಗಳಿದ್ದರೂ ಮುಂದಿನ ಎರಡು ವರ್ಷಗಳಲ್ಲಿ ಜೈಲಿಗೆ ಕಳುಹಿಸುತ್ತೇವೆ’ ಎಂದರು.

ಗುಜರಾತ್‌ನಲ್ಲಿ 3 ಸಾವಿರ ಕೆ.ಜಿ ಡ್ರಗ್ಸ್‌ ಪತ್ತೆಯಾದ ಕುರಿತು ಕೇಳಲಾದ ಪ್ರಶ್ನೆಗೆ, ‘ಇದು ಗುಜರಾತ್‌ ಸರ್ಕಾರದ ಡ್ರಗ್ಸ್‌ ವಿರೋಧಿ ಕ್ರಮಗಳ ಫಲವಾಗಿದೆ. ಡ್ರಗ್ಸ್‌ ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಬಂಧಿಸಲಾಗುವುದು’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT