‘ಪವಾರ್ ಅದಾನಿ ಸಂಬಂಧ ವೈಯಕ್ತಿಕ’
‘ಶರದ್ ಪವಾರ್ ಮತ್ತು ಗೌತಮ್ ಅದಾನಿ ನಡುವಿನ ಸಂಬಂಧ ರಾಜಕೀಯಕ್ಕಿಂತ ಹೆಚ್ಚಾಗಿ ವೈಯಕ್ತಿಕವಾಗಿದೆ’ ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)ಯ ಮುಖ್ಯ ವಕ್ತಾರ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಹೇಳಿದ್ದಾರೆ. ‘ಶರದ್ ಪವಾರ್ ಪಕ್ಷದ ವಿಭಜನೆಯಲ್ಲಿ ಅದಾನಿ ಸಹೋದರನ ಪಾತ್ರವಿದೆ ಎಂದು ನಾವು ಕೇಳಿದ್ದೇವೆ. ರೋಹಿತ್ ಪವಾರ್ ಅವರು ಅದಾನಿಯ ಕಾರನ್ನು ಏಕೆ ಚಲಾಯಿಸುತ್ತಿದ್ದರು’ ಎಂದು ಪ್ರಶ್ನಿಸಿದ್ದಾರೆ.