ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬಿನ ಗಾಯಕ ಸಿಧು ಮೂಸೆವಾಲಾ ಪೋಷಕರಿಗೆ ಗಂಡು ಮಗು

Published 17 ಮಾರ್ಚ್ 2024, 7:47 IST
Last Updated 17 ಮಾರ್ಚ್ 2024, 7:47 IST
ಅಕ್ಷರ ಗಾತ್ರ

ಬಠಿಂಡಾ: ಎರಡು ವರ್ಷಗಳ ಹಿಂದೆ ಹಂತಕರ ಗುಂಡಿಗೆ ಬಲಿಯಾದ ಪಂಜಾಬಿನ ಗಾಯಕ ಸಿಧು ಮೂಸೆವಾಲಾ (ಶುಭದೀಪ್‌ ಸಿಂಗ್‌ ಸಿಧು) ಅವರ ಪೋಷಕರಿಗೆ ಗಂಡು ಮಗುವಿನ ಜನನವಾಗಿದೆ.

ಮೂಸೆವಾಲಾ ಅವರ ತಂದೆ ಬಲಕೌರ್ ಸಿಂಗ್‌ ಅವರು ತಮ್ಮ ಫೇಸ್‌ಬುಕ್‌ ಪುಟದಲ್ಲಿ ನವಜಾತ ಶಿಶುವಿನ ಜನನವನ್ನು ಘೋಷಿಸಿದ್ದಾರೆ.

‘ಮೂಸೆವಾಲಾನ ಕಿರಿಯ ಸಹೋದರನ ಆಗಮನದಿಂದ ನಾನು ಮತ್ತು ನನ್ನ ಪತ್ನಿ ಚರಣ್‌ ಕೌರ್‌ಗೆ ಸಂತಸವಾಗಿದೆ’ ಎಂದು ಅವರು ತಿಳಿಸಿದ್ದಾರೆ. 

‘ಶುಭದೀಪ್‌ ಅನ್ನು ಪ್ರೀತಿಸುವ ಲಕ್ಷಾಂತರ ಜನರ ಆಶೀರ್ವಾದದ ಜತೆಗೆ, ದೇವರು ನಮಗೆ ಶುಭ್‌ ಅವರ ಚಿಕ್ಕ ಸಹೋದರನೊಂದಿಗೆ ಆಶೀರ್ವಾದ ಮಾಡಿದ್ದಾರೆ’ ಎಂದು ಅವರು ಪೋಸ್ಟ್‌ ಮಾಡಿದ್ದಾರೆ.

ಮೂಲಗಳ ಪ್ರಕಾರ, 60 ವರ್ಷದ ಬಲಕೌರ್ ಮತ್ತು 58 ವರ್ಷದ ಚರಣ್‌ ಕೌರ್‌ ಅವರು ಮಗುವನ್ನು ಪಡೆಯಲು ಐವಿಎಫ್‌ ಚಿಕಿತ್ಸೆ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT