ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಕ್ಷಣವೇ ಉಚಿತ ಕೋವಿಶೀಲ್ಡ್ ಲಸಿಕೆ ವಿತರಿಸಿ: ಎಸ್‌ಐಐ ಒತ್ತಾಯ

ಕೇಂದ್ರ ಸರ್ಕಾರಕ್ಕೆ ಸೀರಂ ಸಂಸ್ಥೆ ಮನವಿ
Last Updated 24 ಏಪ್ರಿಲ್ 2022, 15:43 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಕೋವ್ಯಾಕ್ಸ್ ಸೌಲಭ್ಯದಡಿಯಲ್ಲಿ ಲಸಿಕೆ ಮತ್ತು ಪ್ರತಿರಕ್ಷಣೆಗಳ ಜಾಗತಿಕ ಒಕ್ಕೂಟವು (ಜಿಎವಿಐ) ಉಚಿತವಾಗಿ ನೀಡಿರುವ ಕೋವಿಶೀಲ್ಡ್‌ನ 10 ಕೋಟಿ ಡೋಸ್‌ಗಳನ್ನು ಬಳಸಬೇಕೆಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ಸಂಬಂಧ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಪತ್ರ ಬರೆದಿರುವ ಎಸ್‌ಐಐ, ‘ಪ್ರಸ್ತುತ ಲಭ್ಯವಿರುವ 10 ಕೋಟಿ ಉಚಿತ ಕೋವಿಶೀಲ್ಡ್ ಡೋಸ್‌ಗಳನ್ನು ಕೇಂದ್ರ ಸರ್ಕಾರವು ಸಕಾಲಿಕವಾಗಿ ಬಳಸಿಕೊಳ್ಳಬೇಕು. ಇಲ್ಲದಿದ್ದರೆ ಕೋವಿಡ್‌ನಿಂದ ಜೀವ ಉಳಿಸುವ ಈ ಡೋಸ್‌ಗಳು ವ್ಯರ್ಥವಾಗಲಿವೆ’ ಎಂದೂ ಹೇಳಿದೆ.

‘ಯುನಿಸೆಫ್ ಮೂಲಕ ಭಾರತಕ್ಕೆ ಈಗಾಗಲೇ 14 ಕೋಟಿ ಡೋಸ್ ಕೋವಿಶೀಲ್ಡ್ ಅನ್ನು ಪೂರೈಸಲಾಗಿದೆ. ದೇಶದಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವ ಕಾರಣ, ನಮ್ಮ ನಾಗರಿಕರಿಗೆ ತಕ್ಷಣವೇ ಲಭ್ಯವಿರುವ 10 ಕೋಟಿ ಉಚಿತ ಕೋವಿಶೀಲ್ಡ್ ಲಸಿಕೆ ಡೋಸ್‌ಗಳನ್ನು ಬಳಸುವುದು ಕೋವಿಡ್ ಉಲ್ಬಣವನ್ನು ನಿಯಂತ್ರಿಸಲು ಪ್ರಯೋಜನಕಾರಿಯಾಗಿದೆ. ಇದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ’ ಎಂದು ಪತ್ರದಲ್ಲಿ ಎಸ್‌ಐಐನ ಸರ್ಕಾರ ಮತ್ತು ನಿಯಂತ್ರಕ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT