ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂನಲ್ಲಿ ‘ಸ್ಮಾರ್ಟ್‌ ಫೆನ್ಸ್’ 2020 ಜುಲೈಗೆ ಪೂರ್ಣ: ಬಿಎಸ್‌ಎಫ್

Last Updated 29 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ‘ಅಸ್ಸಾಂನಲ್ಲಿ ಭಾರತ–ಬಾಂಗ್ಲಾದೇಶದ ಗಡಿ ನಡುವಿನ ಅಂತರದಲ್ಲಿ ‘ಸ್ಮಾರ್ಟ್‌ ಫೆನ್ಸ್‌’ (ಗಡಿ ಬೇಲಿ) ನಿರ್ಮಿಸಲಾಗುತ್ತಿದ್ದು, 2020ರ ಜುಲೈ ವೇಳೆಗೆ ಇದು ಪೂರ್ಣಗೊಳ್ಳುವ ನಿರೀಕ್ಷೆ ಇದೆ’ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮುಖ್ಯಸ್ಥ ವಿ.ಕೆ. ಜೊಹ್ರಿ ತಿಳಿಸಿದ್ದಾರೆ.

ಇದೇ ಡಿಸೆಂಬರ್‌ ಅಂತ್ಯಕ್ಕೆ ಯೋಜನೆ ಪೂರ್ಣಗೊಳ್ಳಬೇಕೆಂದು ಈ ಮೊದಲು ನಿಗದಿಯಾಗಿತ್ತು.ಆದರೆ ಈ ಪ್ರಾಂತದಲ್ಲಿ ಈ ವರ್ಷ ಭಾರಿ ಮಳೆ ಹಾಗೂ ಪ್ರವಾಹ ಉಂಟಾಗಿದ್ದರಿಂದ ಯೋಜನೆ ಪೂರ್ಣಗೊಳಿಸುವುದು ವಿಳಂಬವಾಯಿತು.

ಅಸ್ಸಾಂನ ಧುಬ್ರಿಯಲ್ಲಿ, ಬ್ರಹ್ಮಪುತ್ರ ನದಿಗೆ 55 ಕಿ.ಮೀ. ಉದ್ದದ ‘ಸ್ಮಾರ್ಟ್‌ ಫೆನ್ಸ್‌’ ನಿರ್ಮಿಸಲಾಗುತ್ತಿದ್ದು, ತಂತ್ರಜ್ಞಾನ ಆಧರಿತ ಕಣ್ಗಾವಲು ಸೇರಿದಂತೆ ಆಧುನಿಕ ವ್ಯವಸ್ಥೆ ಅಳವಡಿಸಲಾಗುತ್ತಿದೆ.

ಈ ಪ್ರದೇಶದಲ್ಲಿ ವಲಸಿಗರಅಕ್ರಮವಾಗಿಪ್ರವೇಶಿಸುವುದು ಹಾಗೂ ಗೋ ಕಳ್ಳಸಾಗಣಿಕೆ ನಡೆಯುವುದು ಹೆಚ್ಚಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT