ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರನಾಯಕರ ಅಂತ್ಯಕ್ರಿಯೆಗೆ ಮೀಸಲು ‘ಸ್ಮೃತಿ ಸ್ಥಳ’

Last Updated 17 ಆಗಸ್ಟ್ 2018, 11:08 IST
ಅಕ್ಷರ ಗಾತ್ರ

ನವದೆಹಲಿ:ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಇಂದು (ಶುಕ್ರವಾರ) ದೆಹಲಿಯ ಸ್ಮೃತಿ ಸ್ಥಳದಲ್ಲಿ ನೆರವೇರುತ್ತಿದೆ.

ಈ ಸ್ಥಳದ ಪೂರ್ಣ ಹೆಸರು ರಾಷ್ಟ್ರೀಯ ಸ್ಮೃತಿ ಸ್ಥಳ. ಇದು ಯಮುನಾ ನದಿ ತೀರದಲ್ಲಿದೆ. ಈ ಸ್ಥಳವನ್ನು ರಾಷ್ಟ್ರ‍ಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳ ಅಂತ್ಯಕ್ರಿಯೆಗಾಗಿಯೇ ಮೀಸಲಿಡಲಾಗಿದೆ.

ಮಾಜಿ ಪ್ರಧಾನಿಗಳಾದ ಜವಾಹರಲಾಲ್‌ ನೆಹರು ಅವರ ಸಮಾಧಿ ಇರುವ ‘ಶಾಂತಿ ವನ’ ಮತ್ತು ಲಾಲ್‌ಬಹದ್ದೂರ್‌ ಶಾಸ್ತ್ರಿ ಅವರ ಸಮಾಧಿ ಇರುವ ‘ವಿಜಯ್‌ ಘಾಟ್‌’ ನಡುವಿನ ಹಸಿರು ಪರಿಸರದಲ್ಲಿನ ಎತ್ತರದ ಸ್ಥಳದಲ್ಲಿ ಬಿಜೆಪಿಯ ನಾಯಕ ವಾಜಪೇಯಿ ಅವರ ಅಂತ್ಯಕ್ರಿಯೆ ನಡೆಯಲಿದೆ. ರಾಜ್‌ಘಾಟ್‌ ಸಮೀಪದ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ರಾಷ್ಟ್ರ ನಾಯಕರ ಅಂತ್ಯಕ್ರಿಯೆ ನಡೆಸಲು ನಿಯಮವೊಂದನ್ನು ರೂಪಿಸಿ ಕೇಂದ್ರ ಸಚಿವ ಸಂಪುಟ 2013ರಲ್ಲಿ ಅನುಮೋದನೆ ನೀಡಿದೆ.

ಕೇಂದ್ರ ಸರ್ಕಾರ ರಾಜಧಾನಿಯಲ್ಲಿ ವಾಜಪೇಯಿ ಅವರ ಸ್ಮಾರಕ ನಿರ್ಮಿಸುವ ಸಾಧ್ಯತೆ ಇದೆ. ಆದರೆ, ಸ್ಥಳ ಯಾವುದು ಎಂದು ಇನ್ನೂ ಘೋಷಣೆಯಾಗಿಲ್ಲ.

ಮಾಜಿ ಪ್ರಧಾನಿಗಳ ಸ್ಮಾರಕಗಳು

1) ಇಂದಿರಾ ಗಾಂಧಿ – ಶಕ್ತಿ ಸ್ಥಳ– ದೆಹಲಿ

2) ವಿ.ಪಿ. ಸಿಂಗ್‌ –ದಿಯಾ ಗ್ರಾಮ– ರಾಮಗಡ ಅಲಹಾಬಾದ್

3) ಜವಾಹರ ಲಾಲ್‌ ನೆಹರು– ಶಾಂತಿವನ –ದೆಹಲಿ

4) ಮುರಾರ್ಜಿ ದೇಸಾಯಿ–ಅಭಯ್‌ ಘಾಟ್‌–ಗುಜರಾತ್‌

5) ಚಂದ್ರಶೇಖರ್‌ –ಏಕ್ತಾ ಸ್ಥಳ –ದೆಹಲಿ

6) ಲಾಲ್ ಬಹದ್ದೂರ್‌ ಶಾಸ್ತ್ರಿ–ವಿಜಯ್‌ ಘಾಟ್ –ದೆಹಲಿ

7) ರಾಜೀವ್‌ ಗಾಂಧಿ–ವೀರಭೂಮಿ–ದೆಹಲಿ

8) ಇಂದ್ರಕುಮಾರ್‌ ಗುಜ್ರಾಲ್‌–ಏಕ್ತಾ ಸ್ಥಳ–ದೆಹಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT