ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ ಕಾರಿಡಾರ್‌ ರಕ್ಷಣೆಗೆ ಖಾಸಗಿ ರಕ್ಷಿತಾರಣ್ಯ

Last Updated 11 ಆಗಸ್ಟ್ 2018, 19:55 IST
ಅಕ್ಷರ ಗಾತ್ರ

ನವದೆಹಲಿ: ‘ಆನೆ ಕಾರಿಡರ್‌ಗಳನ್ನು ಸಂರಕ್ಷಿಸಲು ‘ಖಾಸಗಿ ರಕ್ಷಿತಾರಣ್ಯ’ಗಳನ್ನು ಆರಂಭಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ’ ಎಂದು ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.

ಆನೆ ಮತ್ತು ಆನೆ ಸಂರಕ್ಷಣೆಗಾಗಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವರದಿ ನೀಡಿ ಎಂದು ಸುಪ್ರೀಂ ಕೋರ್ಟ್‌ ರಾಜ್ಯವನ್ನು ಕೇಳಿತ್ತು. ಹೀಗಾಗಿ ರಾಜ್ಯದಲ್ಲಿ ಈಗಾಗಲೇ ಆನೆ ಕಾರಿಡಾರ್‌ಗಳ ರಕ್ಷಣೆ ಸಲುವಾಗಿ ಆರಂಭಿಸಿರುವ ಕಾರ್ಯಕ್ರಮಗಳ ಬಗ್ಗೆಯೂ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

‘ಖಾಸಗಿ ರಕ್ಷಿತಾರಣ್ಯಗಳನ್ನು ಘೋಷಿಸುವ ಬಗ್ಗೆ ಇನ್ನಷ್ಟೇ ಚಿಂತನೆ ನಡೆಸಲಾಗುತ್ತಿದೆ. ಇವು ಕಾರ್ಯರೂಪಕ್ಕೆ ಬಂದರೆ ಆನೆ, ಕಾಡುಕೋಣ, ಹುಲಿ, ಚಿರತೆಗಳ ಓಡಾಟಕ್ಕೆ ಅನುಕೂಲವಾಗುತ್ತದೆ. ಜತೆಗೆ ಮಾನವ–ವನ್ಯಜೀವಿ ಸಂಘರ್ಷಕ್ಕೂ ಕಡಿವಾಣ ಬೀಳುತ್ತದೆ’ ಎಂದು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಏನಿದು ಖಾಸಗಿ ರಕ್ಷಿತಾರಣ್ಯ...

* ಇದಕ್ಕಾಗಿ ಪ್ರತ್ಯೇಕ ಕಾನೂನೊಂದನ್ನು ರೂಪಿಸಲಾಗುತ್ತದೆ

* ಆನೆ ಕಾರಿಡಾರ್‌ಗಳ ಸುತ್ತಮುತ್ತಲಿನ ಜಮೀನನ್ನು ಖಾಸಗಿ ರಕ್ಷಿತಾರಣ್ಯ ಎಂದು ಘೋಷಿಸಲು, ಆ ಜಮೀನುಗಳ ಮಾಲೀಕರನ್ನು ಉತ್ತೇಜಿಸಲಾಗುತ್ತದೆ

* ಇದರಿಂದ ಆನೆ ಕಾರಿಡಾರ್‌ಗಳಲ್ಲಿ ಮಾನವ ಚಟುವಟಿಕೆಗಳು ಮತ್ತು ಒತ್ತುವರಿಯನ್ನು ತಡೆದಂತಾಗುತ್ತದೆ


ಈಗಾಗಲೇ ತೆಗೆದುಕೊಂಡಿರುವ ಕ್ರಮಗಳು

ಎಡೆಯರಹಳ್ಳಿ–ದೊಡ್ಡಸಂಪಿಗೆ ಕಾರಿಡಾರ್

* ರಾಜ್ಯ ಅರಣ್ಯ ಇಲಾಖೆ ಮತ್ತು ವೈಲ್ಡ್‌ಲೈಫ್‌ ಟ್ರಸ್ಟ್‌ ಆಫ್ ಇಂಡಿಯಾ ಈ ಕಾರಿಡಾರನ್ನು ರಕ್ಷಿಸುವ ಕೆಲಸ ಮಾಡುತ್ತಿವೆ

* ಇದು ಮಲೆ ಮಹದೇಶ್ವರ ರಕ್ಷಿತಾರಣ್ಯ ಮತ್ತು ಬಿಳಿ ಗಿರಿರಂಗನಾಥಸ್ವಾಮಿ ಹುಲಿ (ಬಿಆರ್‌ಟಿ) ರಕ್ಷಿತಾರಣ್ಯಗಳ ಮಧ್ಯೆ ಸಂಪರ್ಕ ಕಲ್ಪಿಸುತ್ತದೆ

25.37 ಎಕರೆಯಷ್ಟು ಜಮೀನನ್ನು 2003ರಲ್ಲೇ ಖರೀದಿಸಲಾಗಿದೆ. ಈ ಜಮೀನನ್ನು 2009ರಲ್ಲಿ ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿದೆ. ಈ ಪ್ರದೇಶವನ್ನು ಮಲೆ ಮಹದೇಶ್ವರ ರಕ್ಷಿತಾರಣ್ಯದ ಭಾಗ ಎಂದು ಘೋಷಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ


ಚಾಮರಾಜನಗರ–ತಲಮಲೈ ಕಾರಿಡಾರ್

* ರಾಜ್ಯದ ಬಿಆರ್‌ಟಿ ರಕ್ಷಿತಾರಣ್ಯದ ಪುಣಜನೂರು ರೇಂಜ್ ಮತ್ತು ತಮಿಳುನಾಡಿನ ಸತ್ಯಮಂಗಲ ಹುಲಿ ರಕ್ಷಿತಾರಣ್ಯದ ತಲವಾಡಿ ರೇಂಜ್ ಮಧ್ಯೆ ಸಂಪರ್ಕ ಕಲ್ಪಿಸುತ್ತದೆ

*ರಾಜ್ಯ ಅರಣ್ಯ ಇಲಾಖೆ ಮತ್ತು ವೈಲ್ಡ್‌ಲೈಫ್‌ ಟ್ರಸ್ಟ್‌ ಆಫ್ ಇಂಡಿಯಾ ಈ ಕಾರಿಡಾರನ್ನು ರಕ್ಷಿಸುವ ಕೆಲಸ ಮಾಡುತ್ತಿವೆ

* ಈ ಕಾರಿಡಾರ್‌ನಲ್ಲಿರುವ ಗೊರಮಾಡು ದೊಡ್ಡಿ ಮತ್ತು ದೊಡ್ಡ ಮುದ್ದಹಳ್ಳಿಗಳ ಮಧ್ಯೆ ಕಾರಿಡಾರ್‌ನ ಅಗಲೀಕರಣಕ್ಕೆ ಯೋಜನೆ ರೂಪಿಸಲಾಗಿದೆ

* ಈ ಎರಡೂ ಹಳ್ಳಿಗಳ ನಡುವಣ ಪ್ರದೇಶದಲ್ಲಿ ಜಮೀನಿನ ಖರೀದಿ ಮತ್ತು ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ

1.5 ಕಿ.ಮೀ. ಕಾರಿಡಾರ್‌ನ ಉದ್ದ

200–300 ಮೀಟರ್ ಕಾರಿಡಾರ್‌ನ ಅಗಲ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT