ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರಣೆ ಮುಂದೂಡಿಕೆಗೆ ಎಸ್‌ಒಪಿ ರೂಪಿಸಲು ಸುಪ್ರೀಂ ಕೋರ್ಟ್‌ ಸಮಿತಿ

Published 27 ಡಿಸೆಂಬರ್ 2023, 16:00 IST
Last Updated 27 ಡಿಸೆಂಬರ್ 2023, 16:00 IST
ಅಕ್ಷರ ಗಾತ್ರ

ನವದೆಹಲಿ: ವಿಚಾರಣೆ ಮುಂದೂಡಿಕೆಗೆ ವಕೀಲರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಪ್ರಮಾಣೀಕೃತ ಕಾರ್ಯಾಚರಣೆ ವಿಧಾನವನ್ನು(ಎಸ್‌ಒಪಿ) ಸಿದ್ಧಪಡಿಸಲು ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯನ್ನು ಸುಪ್ರೀಂ ಕೋರ್ಟ್‌ ರಚಿಸಿದೆ.

ಎಸ್‌ಒಎಸ್‌ ಸಿದ್ಧಪಡಿಸುವ ನಿಟ್ಟಿನಲ್ಲಿ ಸಲಹೆಗಳನ್ನು ನೀಡುವಂತೆ ಈ ಸಮಿತಿಯು ವಕೀಲರ ಸಂಘ ಮತ್ತು ಸಂಬಂಧಪಟ್ಟ ಇತರರಿಗೆ ಕೇಳಿದೆ.

ವಿಚಾರಣೆ ಮುಂದೂಡಲು ವಕೀಲರು ಮನವಿ ಪತ್ರಗಳನ್ನು ನೀಡುವ ಕ್ರಮವನ್ನು ನಿಲ್ಲಿಸುವುದಾಗಿ ಸುಪ್ರೀಂ ಕೋರ್ಟ್‌ ಡಿಸೆಂಬರ್‌ 5 ಮತ್ತು 22ರಂದು ಸುತ್ತೋಲೆಗಳನ್ನು ಹೊರಡಿಸಿತ್ತು. ಈ ಕುರಿತು ಸುಪ್ರೀಂ ಕೋರ್ಟ್‌ ವಕೀಲರ ಸಂಘ (ಎಸ್‌ಸಿಬಿಎ) ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ನೋಂದಿತರಾಗಿರುವ ವಕೀಲ ಸಂಘ (ಎಸ್‌ಸಿಎಒಆರ್‌ಎ) ಕಳವಳ ವ್ಯಕ್ತಪಡಿಸಿದ್ದವು. ಆ ಬಳಿಕ ಈ ಬೆಳವಣಿಗೆ ನಡೆದಿದೆ.

‘ಅರ್ಜಿದಾರರ ಹಿತಾಸಕ್ತಿ ಮತ್ತು ಚಳಿಗಾಲದ ರಜೆಯನ್ನು ಗಮನದಲ್ಲಿರಿಸಿಕೊಂಡು ಗರಿಷ್ಠ ಸಂಖ್ಯೆಯಲ್ಲಿ ಪ್ರಕರಣಗಳನ್ನು ವಿಚಾರಣೆಗಾಗಿ ಪಟ್ಟಿಮಾಡಬೇಕಿದೆ. ಹೀಗಾಗಿ ವಿಚಾರಣೆ ಮುಂದೂಡಿಕೆ ಪತ್ರವನ್ನು ಸಲ್ಲಿಸುವ ಪರಿಪಾಠವನ್ನು ಡಿಸೆಂಬರ್‌ 15ರ ವರೆಗೆ ನಿಲ್ಲಿಸಲಾಗಿದೆ’ ಎಂದು ಸುಪ್ರಿಂ ಕೋರ್ಟ್‌ ಡಿ. 5ರಂದು ಸಲ್ಲಿಸಿದ್ದ ಸುತ್ತೋಲೆಯಲ್ಲಿ ಹೇಳಿತ್ತು.

‘ವಿಚಾರಣೆಮುಂದೂಡಿಕೆಗೆ ಮನವಿ ಸಲ್ಲಿಸಲು ಇರುವ ಅವಕಾಶವನ್ನು ಮುಂದುವರೆಸುವಂತೆ ಎಸ್‌ಸಿಬಿಎ ಮತ್ತು ಎಸ್‌ಸಿಎಒಆರ್‌ಎ ಕೋರಿವೆ. ಹೀಗಾಗಿ, ಕಲಾಪ ಮುಂದೂಡಿಕೆಗೆ ಎಸ್‌ಒಪಿ ರೂಪಿಸಲು ಸಂಬಂಧಪಟ್ಟ ಪ್ರಾಧಿಕಾರವು ಸಮಿತಿಯನ್ನು ರಚಿಸಿದೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಇದೇವೇಳೆ, ಮುಂದಿನ ಆದೇಶದವರೆಗೂ ವಿಚಾರಣೆ ಮುಂದೂಡಿಕೆ ಪತ್ರಗಳ ಸ್ವೀಕರಿಸಲಾಗುವುದಿಲ್ಲ ಎಂದು ಕೂಡಾ ಕೋರ್ಟ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT