ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ನ್ಯಾಯಮೂರ್ತಿ ನಿವಾಸದಲ್ಲಿ ನಗದು | ಆಂತರಿಕ ತನಿಖೆ ಶುರು: ಸುಪ್ರೀಂ ಕೋರ್ಟ್

Published : 21 ಮಾರ್ಚ್ 2025, 9:32 IST
Last Updated : 21 ಮಾರ್ಚ್ 2025, 9:32 IST
ಫಾಲೋ ಮಾಡಿ
Comments
ಹಣ ಪತ್ತೆ ಆಗಿಲ್ಲ: ಸ್ಪಷ್ಟನೆ
ಯಶವಂತ್ ವರ್ಮಾ ಅವರ ನಿವಾಸಕ್ಕೆ ಬಿದ್ದಿದ್ದ ಬೆಂಕಿ ನಂದಿಸಲು ತೆರಳಿದ್ದ ಸಿಬ್ಬಂದಿಗೆ ಅಲ್ಲಿ ಯಾವುದೇ ನಗದು ಸಿಕ್ಕಿಲ್ಲ ಎಂದು ದೆಹಲಿ ಅಗ್ನಿಶಾಮಕ ದಳದ ಮುಖ್ಯಸ್ಥ ಅತುಲ್‌ ಗರ್ಗ್ ಶುಕ್ರವಾರ ಹೇಳಿದ್ದಾರೆ. ‘ವರ್ಮಾ ನಿವಾಸದಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎಂದು ಮಾರ್ಚ್‌ 14ರ ರಾತ್ರಿ 11.35ಕ್ಕೆ ನಿಯಂತ್ರಣ ಕೊಠಡಿಗೆ ಕರೆ ಬಂದಿದೆ. ಬೆಂಕಿ ನಂದಿಸಿದ ತಕ್ಷಣ, ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ನಂತರ, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಿಂದ ಹೊರಟುಹೋದರು. ನಮ್ಮ ತಂಡಕ್ಕೆ ಯಾವುದೇ ನಗದು ಸಿಕ್ಕಿಲ್ಲ’ ಎಂದರು.
ನಗದು ಪತ್ತೆ ಹೇಗೆ?
ಯಶವಂತ್ ವರ್ಮಾ ಅವರ ಮನೆಯಲ್ಲಿ ಮಾರ್ಚ್‌ 14ರಂದು ಬೆಂಕಿ ಅವಘಡ ಸಂಭವಿಸಿತ್ತು. ಈ ವೇಳೆ ಅವರು ಮನೆಯಲ್ಲಿ ಇರಲಿಲ್ಲ. ಅವರ ಕುಟುಂಬದ ಸದಸ್ಯರು ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಆ ಬಳಿಕ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯಿಂದ ಆಗಿರುವ ಹಾನಿಯನ್ನು ಪರಿಶೀಲಿಸುವಾಗ ಮನೆಯಲ್ಲಿ ಭಾರಿ ಪ್ರಮಾಣದ ನೋಟಿನ ಕಂತೆಗಳು ಪತ್ತೆ ಯಾಗಿವೆ ಎನ್ನಲಾಗಿದೆ. ಪತ್ತೆ ಯಾದ ಹಣ ಎಷ್ಟು ಎಂಬುದು ತಿಳಿದಿಲ್ಲ.
2021ರಲ್ಲಿ ನೇಮಕ
ಯಶವಂತ್ ವರ್ಮಾ ಅವರು 2021ರ ಅಕ್ಟೋಬರ್‌ನಲ್ಲಿ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಅಲಹಾಬಾದ್‌ನಲ್ಲಿ ಜನಿಸಿದ ಅವರು 1992ರಲ್ಲಿ ವಕೀಲಿಕೆ ಆರಂಭಿಸಿದ್ದರು. 56 ವರ್ಷದ ಅವರು 2014ರ ಅಕ್ಟೋಬರ್‌ನಲ್ಲಿ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 2016ರ ಫೆಬ್ರುವರಿಯಲ್ಲಿ ಅದೇ ಹೈಕೋರ್ಟ್‌ನಲ್ಲಿ ಕಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT