ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರ್ಕ್‌ನಲ್ಲಿ ಕಸಗುಡಿಸಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ

Published 1 ಅಕ್ಟೋಬರ್ 2023, 7:34 IST
Last Updated 1 ಅಕ್ಟೋಬರ್ 2023, 7:54 IST
ಅಕ್ಷರ ಗಾತ್ರ

ನವದೆಹಲಿ; ಪ್ರಧಾನಿ ನರೇಂದ್ರ ಮೋದಿ ಅವರು ಕರೆಕೊಟ್ಟಿರುವ ಸ್ವಚ್ಛತಾ ಅಭಿಯಾನದ ಶ್ರಮದಾನಕ್ಕೆ ದೇಶದಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಕ್ಕಳಿಂದ ಹಿಡಿದು ರಾಜಕೀಯ ನಾಯಕರವರೆಗೂ ಒಂದು ಗಂಟೆಯ ಶ್ರಮದಾನದಲ್ಲಿ ಪಾಲ್ಗೊಂಡರು.

ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಕುಸ್ತಿಪಟು ಅಂಕಿತ್‌ ಅವರೊಂದಿಗೆ ಪಾರ್ಕ್‌ನಲ್ಲಿ ಕಸ ಗುಡಿಸುವ ಮೂಲಕ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು. ಈ ಬಗ್ಗೆ ಎಕ್ಸ್‌ನಲ್ಲಿ ಮೋದಿ ಪೋಸ್ಟ್‌ ಹಂಚಿಕೊಂಡಿದ್ದಾರೆ. 

‘ಇಂದು, ರಾಷ್ಟ್ರವು ಸ್ವಚ್ಛತೆಯತ್ತ ಗಮನಹರಿಸುತ್ತಿರುವಾಗ, ಅಂಕಿತ್ ಬೈಯನಪುರಿಯ ಮತ್ತು ನಾನು ಅದೇ ರೀತಿ ಮಾಡಿದೆವು! ಕೇವಲ ಶುಚಿತ್ವದ ಹೊರತಾಗಿ, ನಾವು ಫಿಟ್‌ನೆಸ್ ಮತ್ತು ಯೋಗಕ್ಷೇಮವನ್ನೂ ಸ್ವಚ್ಛತೆಯೊಂದಿಗೆ ಸೇರಿಸಿಕೊಂಡಿದ್ದೇವೆ. ಇದು ಸ್ವಚ್ಛ ಮತ್ತು ಸ್ವಸ್ತ್ ಭಾರತ್’ ಎಂದು ಮೋದಿ ಬರೆದುಕೊಂಡಿದ್ದಾರೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಪ್ರಕಾರ, ಮೆಗಾ ಡ್ರೈವ್‌ನಡಿಯಲ್ಲಿ ದೇಶದಾದ್ಯಂತ 9.20 ಲಕ್ಷಕ್ಕೂ ಹೆಚ್ಚು ಸ್ಥಳಗಳನ್ನು ಆಯ್ದುಕೊಳ್ಳಲಾಗಿದೆ.

ಪೊರಕೆ ಹಿಡಿದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಹಮದಾಬಾದ್‌ನಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು. ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರು ದೆಹಲಿಯ ಝಾಂಡೇವಾಲನ್ ಪ್ರದೇಶದಲ್ಲಿ ನಡೆದ ಅಭಿಯಾನದಲ್ಲಿ ಭಾಗವಹಿಸಿದ್ದರು.

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಅಹಮದಾಬಾದ್‌ನಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು. ಬಿಜೆಪಿ ಸಂಸದ ದಿನೇಶ್ ಶರ್ಮಾ ಅವರು ಸ್ವಚ್ಛ ಅಭಿಯಾನದಲ್ಲಿ ಭಾಗವಹಿಸಿ, ‘ಸ್ವಚ್ಛತೆ ದೇಶದ ಮುಖವಾಗಿದೆ’ ಎಂದು ಹೇಳಿದ್ದಾರೆ.

ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರು ದೆಹಲಿಯಲ್ಲಿ ಸ್ವಯಂಸೇವಕರಾಗಿ ಸ್ವಚ್ಛತಾ ಚಟುವಟಿಕೆಯನ್ನು ಕೈಗೊಂಡರು.

ಕ್ರಿಕೆಟ್‌ ಆಟಗಾರರಾದ ವಿರಾಟ್ ಕೊಹ್ಲಿ,ರೋಹಿತ್ ಶರ್ಮಾ ಅವರು ‘ಏಕ್ ತಾರೀಖ್, ಏಕ್ ಘಂಟಾ, ಏಕ್ ಸಾಥ್’ಗಾಗಿ ಒಗ್ಗೂಡಿ ಅತಿದೊಡ್ಡ ಆಂದೋಲನಕ್ಕೆ ಸೇರಲು ಜನರಲ್ಲಿ ಮನವಿ ಮಾಡಿದ್ದಾರೆ.

ಇತ್ತೀಚಿನ ಮನ್ ಕಿ ಬಾತ್ ಸಂಚಿಕೆಯಲ್ಲಿ, ಮೋದಿ ಅವರು ಅಕ್ಟೋಬರ್ 1 ರಂದು ಎಲ್ಲಾ ನಾಗರಿಕರಿಂದ ‘ಸ್ವಚ್ಛತಾಕ್ಕಾಗಿ ಒಂದು ಗಂಟೆಯ ಶ್ರಮದಾನ’ ಕೈಗೊಳ್ಳಿ  ಎಂದು ಮನವಿ ಮಾಡಿದ್ದರು. ಅಲ್ಲದೆ ಇದು ಮಹಾತ್ಮ ಗಾಂಧಿಯವರ ಜನ್ಮದಿನದ ಹಿಂದಿನ ದಿನ ‘ಸ್ವಚ್ಛಾಂಜಲಿ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT